ಖ್ಯಾತ ವಿಜ್ಞಾನಿ ಹಾಗೂ ಭಾರತೀಯ ಖಭೌತ ವಿಜ್ಞಾನದ ಪಿತಾಮಹ ಎಂದೇ ಖ್ಯಾತಿಯ ಪ್ರೊ. ವೇಣು ಬಾಪು ಅವರ ಜೀವನ ಚರಿತ್ರೆ ಹಾಗೂ ಸಾಧನೆ ಕುರಿತು ಡಾ. ಎಂ.ಎಸ್.ಎಸ್.ಎಸ್. ಮೂರ್ತಿ ಅವರು ಬರೆದ ಕೃತಿ ಇದು. ಭಾರತದಲ್ಲಿ ದೂರದರ್ಶಕ ಆಧರಿತ ಖಗೋಳ ವಿಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ವೇಣು ಅವರ ಸಾಧನೆ ಮಹತ್ವದ್ದು. ಭಾರತದ ಖಗೋಳ ವಿಜ್ಞಾನದಲ್ಲಿ ಡಾ. ವೇಣು ಬಾಪು ಅವರ ಹೆಸರು ಪ್ರಸಿದ್ಧಿ. ವಿಶೇಷವಾಗಿ ಖಗೋಳ ವಿಜ್ಞಾನದಲ್ಲಿ ಸಾಧನೆ ಮಾಡಬೇಕೆಂಬ ಹೆಬ್ಬಯಕೆ ಹೊಂದಿದ ವಿದ್ಯಾರ್ಥಿಗಳಿಗೆ ಈ ಕೃತಿ ಉಪಯುಕ್ತ. ವೇಣು ಅವರ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿಗಳನ್ನುಸಂಗ್ರಹಿಸಿರುವ ಲೇಖಕರು, ಶಿಸ್ತಿನ ನಿರೂಪಣೆಯೂ ಇಲ್ಲಿದೆ. ಭಾರತದಲ್ಲಿ ಖಗೋಳ ವಿಜ್ಞಾನದ ಪರಂಪರೆ, ಬೆಳೆದು ಬಂದ ಬಗೆ ವಿವರವಾಗಿ ಬರೆದಿದ್ದಾರೆ.
©2024 Book Brahma Private Limited.