ಲೇಖಕ ಜೆ.ಆರ್. ಲಕ್ಷ್ಮಣರಾವ್ ಅವರ ಕೃತಿ-ಹಾರಾಡುವ ತಟ್ಟೆಗಳು. ವಿಜ್ಞಾನ ವಿಷಯದ ಲೇಖನ ಸಂಕಲನ. ವೈದ್ಯಕೀಯ ಪಂಥಗಳು, ಪ್ರಳಯದ ಕಲ್ಪನೆ, ವಿಜ್ಞಾನ ಮತ್ತು ಧರ್ಮ, ಸೌರಶಕ್ತಿಯ ಶೇಖರಣೆ, ಅಂತರ್ಜಲ, ಪರಮಾಣು ಸ್ಥಾವರಗಳು ಮತ್ತು ಪರಿಸರ, ಜೀವ ಪ್ರಪಂಚದಲ್ಲಿ ನೈಟ್ರೋಜನ್, ದೋಸೆ ಮತ್ತು ವಿಜ್ಞಾನ - ಇವೇ ಮುಂತಾದ ಅಧ್ಯಯನ ಯೋಗ್ಯ ಲೇಖನಗಳು ಈ ಕೃತಿಯಲ್ಲಿ ಒಳಗೊಂಡಿವೆ.
ಹೊಸತು- ಅಕ್ಟೋಬರ್-2005
ಇಪ್ಪತ್ತು ವೈಜ್ಞಾನಿಕ ಲೇಖನಗಳ ಸಂಗ್ರಹ ಈ ಕೃತಿ, ವೈಜ್ಞಾನಿಕ ದೃಷ್ಟಿ, ಪರಿಸರ, ಪರಮಾಣು ಶಕ್ತಿ, ಸಂಕೀರ್ಣ - ಎಂಬ ನಾಲ್ಕು ಭಾಗಗಳಲ್ಲಿ ಬರಹಗಳಿವೆ. ವೈಜ್ಞಾನಿಕ ಸಂಗತಿಗಳನ್ನು ತಟ್ಟಗಳು ಪರಿಣಾಮಕಾರಿಯಾಗಿ, ಖಚಿತವಾಗಿ ಮತ್ತು ಸರಳವಾಗಿ ಬರೆಯುವ ಜೆ. ಆರ್. ಲಕ್ಷ್ಮಣ ರಾವ್ 'ಜನಪ್ರಿಯ ವಿಜ್ಞಾನ' ಬರಹಗಾರರಲ್ಲಿ ಬಹಳ ಮುಖ್ಯರು. ಇವರ ಬಹುಪಾಲು ಲೇಖನಗಳು ಯಾವುದೋ ವಿಜ್ಞಾನದ ಮಾಹಿತಿ ಕೊಡುವುದಕ್ಕಿಂತ ಹೆಚ್ಚಾಗಿ ವಿಜ್ಞಾನವು ಸಮಾಜದ ಒಳಿತಿಗಾಗಿ ದುಡಿಯಬೇಕೆಂಬ ಹಂಬಲವನ್ನು ಹೊಂದಿರುತ್ತವೆ. ಪ್ರಳಯದ ಕಲ್ಪನೆ, ಅಂತರ್ಜಲ, ಪರಮಾಣುಶಕ್ತಿಯನ್ನು ಕುರಿತ ಬರಹಗಳಲ್ಲಿ ವೈಜ್ಞಾನಿಕ ಮನೋಧರ್ಮದ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸುತ್ತಾರೆ. ವಿಜ್ಞಾನದ ಸದುಪಯೋಗದಲ್ಲಿ ಜನಸಾಮಾನ್ಯರು ವಹಿಸಬೇಕಾದ ಎಚ್ಚರದ ಬಗ್ಗೆಯೂ ಲೇಖಕರು ಗಮನ ಸೆಳೆಯುತ್ತಾರೆ. ಕೆಲವು ಪಾರಿಭಾಷಿಕ ಪದಗಳು ತಕ್ಷಣ ಅರ್ಥವಾಗುವುದಿಲ್ಲ. ಅವುಗಳ ಪರ್ಯಾಯ ಇಂಗ್ಲಿಷ್ ಪದಗಳನ್ನು ಸೂಚಿಸಬಹುದಿತ್ತು.
©2024 Book Brahma Private Limited.