ಈ ಕೃತಿಯು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಲ್ಪಟ್ಟ ಕೃತಿಯಾಗಿದೆ. ರಾಮಣ್ಣಮಾಸ್ತರು ಎಂಬ ಪಾತ್ರದ ಮೂಲಕ ಮಕ್ಕಳಿಗೆ ನಕ್ಷತ್ರದ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನದಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ರಾಮಣ್ಣ ಮಾಸ್ತರರು ವಿದ್ಯಾರ್ಥಿಗಳ ನೆಚ್ಚಿನ ಉಪಾಧ್ಯಾಯರು. ವಿಷಯ ಯಾವುದೇ ಇರಲಿ, ಎಷ್ಟು ಜಟಿಲವೇ ಆಗಿರಲಿ, ಎಂಥ ವಿನೂತನವೇ ಎನ್ನಿಸಲಿ ಅದನ್ನು ತೀರ ಸರಳ ಉದಾ ಹರಣೆ, ದೈನಂದಿನ ಅನುಭವ ಇಲ್ಲವೇ ನೀತಿ ಕತೆಗಳ ಮೂಲಕ ವಿದ್ಯಾರ್ಥಿಗಳಿಗೆ ಮಂದಟ್ಟು ಮಾಡಿ ಸುವುದರಲ್ಲಿ ನಿಸ್ಸಿಮರು. ಆಕಾಶದ ಅದ್ಭುತಗಳನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿ ನಕ್ಷತ್ರಗಳ ಜೊತೆ ಹೃದಯಸಂವಾದ ಏರ್ಪಡಿಸಿದ ಪರಿಯನ್ನು ಇಲ್ಲಿಯ ಪ್ರಾಯೋಗಿಕ ನಿರೂಪಣೆಗಳಲ್ಲಿ ಗಮನಿಸಬಹುದು.
©2024 Book Brahma Private Limited.