ಭೂಮಿಯ ಮೇಲೆ ಜೀವಿಗಳು ಉಳಿಯಲು ನಿಸರ್ಗ ಅನೇಕ ಸವಲತ್ತುಗಳನ್ನು ಕಲ್ಪಿಸಿದೆ. ಈ ಪೈಕಿ ಓಜೋನ್ ಪದರವೂ ಒಂದು. ಸೂರ್ಯನಿಂದ ಬರುವ ಅತಿನೇರಿಳೆ ಕಿರಣಗಳನ್ನು ತಡೆದು ನಮಗೆ ಆಗಬಹುದಾಗಿದ್ದ ಕ್ಯಾನ್ಸರನ್ನು ತಪ್ಪಿಸುತ್ತದೆ. ಓಜೋನ್ ಎಂದರೆ ಬೇರೇನೂ ಅಲ್ಲ, ಆಕ್ಸಿಜನ್ ನ ಅಣ್ಣ ಎನ್ನಬಹುದು. ಅಂದರೆ 3 ಆಕ್ಸಿಜನ್ ಪರಮಾಣುವಿರುವ ಅನಿಲ. ಅಂಟಾರ್ಕ್‍ಟಿಕ ಖಂಡದ ನೆತ್ತಿಯಲ್ಲಿ ಈ ಅನಿಲ ತೆಳುವಾಗಿ ಜಾಗತಿಕ ಮಟ್ಟದಲ್ಲಿ ದೊಡ್ಡ ಆತಂಕವನ್ನೇ ಮೂಡಿಸಿತ್ತು. ಜಗತ್ತು ಜಾಗೃತವಾಗಿ ಓಜೋನ್ ಪದರವನ್ನು ನಾಶಮಾಡುತ್ತಿದ್ದ ಕ್ಲೋರಿನ್ ಪರಮಾಣುವಿನ ಉತ್ಪತ್ತಿಗೆ ಲಗಾಮುಹಾಕಿತು. ಈಗ ನಿಧಾನವಾಗಿ ಓಜೋನ್ ಪದರು ಮುಚ್ಚುತ್ತಿದೆ.
`ಜೀವಿ ರಕ್ಷಕ ಓಜೋನ್ ಪದರ’ ಎಂಬ ಈ ಪುಟ್ಟ ಪುಸ್ತಕದಲ್ಲಿ ವಾಯುಗೋಳದ ಸಂಕ್ಷಿಪ್ತ ಪರಿಚಯವಿದೆ, ಓಜೋನ್‍ನ ಸೃಷ್ಟಿ ಮತ್ತು ನಾಶ ಕುರಿತು ಅತ್ಯಂತ ಸರಳವಾಗಿ ವಿವರಿಸಲಾಗಿದೆ. ಭೂಮಿಯ ವಾಯುಗೋಳವನ್ನು ಸುಸ್ಥಿತಿಯಲ್ಲಿಟ್ಟರೆ ಮಾತ್ರ ನಾವು ಬದುಕಿ ಉಳಿಯಬಲ್ಲೆವು ಎಂಬ ವಿವೇಚನೆಯ ಮಾತುಗಳಿವೆ. 1995ರಿಂದಲೂ ವಿಶ್ವಸಂಸ್ಥೆ ಪ್ರತಿವರ್ಷ ಸೆಪ್ಟೆಂಬರ್ 16ನ್ನು `ವಿಶ್ವ ಓಜೋನ್ ದಿನ’ ಎಂದು ಆಚರಿಸುತ್ತ ಬಂದಿದೆ. ಈ ಎಲ್ಲವನ್ನು ಕುರಿತು ನೀವು ಇಲ್ಲಿ ತಿಳಿಯಬಹುದು, ಮಕ್ಕಳಿಗೂ ತಿಳಿಸಬಹುದು. ಈ ಕೃತಿಯ ಸ್ವಾರಸ್ಯವಿರುವುದೇ ಇಲ್ಲಿ.
©2024 Book Brahma Private Limited.