ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿ ಅವರ ಕೃತಿ ಚಂದ್ರಶೋಧನೆ. ಮನುಕುಲದ ಜ್ಞಾನ ಪರಿಧಿಯ ವಿಸ್ತರಣೆ ಎಂಬ ಉಪಶೀರ್ಷಿಕೆಯಡಿ ಚಂದ್ರ ಗ್ರಹ ಶೋಧನೆಗಾಗಿ ನಡೆಸಿದ ವೈಜ್ಞಾನಿಕ ಶೋಧನೆಯ ಜಾಗತಿಕ ಪ್ರಯತ್ನಗಳನ್ನು ಇಲ್ಲಿ ವಿವರಿಸಲಾಗಿದೆ. ಚಂದ್ರನನ್ನು ಈ ಮೊದಲು ದೇವರು ಎಂಬ ನಂಬಿಕೆ ಇತ್ತು. ಇಂದಿಗೂ ಅದು ಬಹುತೇಕ ಕಡೆ ಮುಂದುವರಿದಿದೆ. ಚಂದ್ರ ದೇವರಲ್ಲ ಎಂಬ ವಿಚಾರವಿದ್ದರೂ ಅದನ್ನು ಮೀರಲಾಗದ ಸ್ಥಿತಿಯಲ್ಲಿ ಬಹುತೇಕರು ಇದ್ದು, ಚಂದ್ರನನ್ನು ಇಂದಿಗೂ ನಂಬಿಕೆಯ ಪರೀಧಿಯಲ್ಲೇ ನೋಡುವುದೇ ಹೆಚ್ಚು. ಆದರೂ, ಅವರು ವಿಜ್ಞಾನದ ಪ್ರಯತ್ನಗಳನ್ನು ತಳ್ಳಿ ಹಾಕುವುದಿಲ್ಲ. ಈ ಎಲ್ಲದರ ಮದ್ಯೆಯೂ ಚಂದ್ರ ಶೋಧನೆ ಎಂಬ ಈ ಕೃತಿ ಮನುಷ್ಯನ ವೈಚಾರಿಕ ಶೋಧದ ತೀವ್ರತೆಯನ್ನು ತೋರುತ್ತದೆ.
©2024 Book Brahma Private Limited.