ಹಲವಾರು ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಸಿ.ಎನ್.ಆರ್. ರಾವ್ ಅವರು ಇದುವರೆಗೂ 42ಕ್ಕೂ ಹೆಚ್ಚು ವೈಜ್ಞಾನಿಕ ಪುಸ್ತಕಗಳು ಹಾಗು 1500ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಈ ಕೃತಿಯಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಉದ್ಭವಿಸಿದ ಬಗೆ, ವಿಶ್ವ ಹಾಗೂ ಸೌರಮಂಡಲವು ರೂಪುಗೊಂಡ ಬಗೆಯನ್ನು ಕುತೂಹಲಕಾರಿಯಾಗಿ, ವಿಶಿಷ್ಟವಾಗಿ ವಿವರಿಸಿದ್ದಾರೆ. ವಿವರಣೆಗೆ ಪೂರಕವಾದ ಭಾವಚಿತ್ರಗಳು ಮತ್ತಷ್ಟು ಮನಸೂರೆಗೊಳ್ಳುತ್ತವೆ. ಮಕ್ಕಳು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳಿಗೆ ಉಪಯುಕ್ತ ಕೃತಿ.
©2024 Book Brahma Private Limited.