ವಿಶ್ವವಿಖ್ಯಾತ ಖಗೋಳ-ಗಣಿತ ವಿಜ್ಞಾನಿ ಆರ್ಯಭಟನು ಬರೆದ ‘ಆರ್ಯಭಟೀಯಮ್’ ಕೃತಿಯು ಮೂಲ ಸಂಸ್ಕೃತದಲ್ಲಿದೆ. ಅದನ್ನು ಎಸ್. ಬಾಲಚಂದ್ರರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಗಣಿತ-ಖಗೋಲ ವಿಜ್ಞಾನವನ್ನು ಮೊದಲ ಬಾರಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿದವರು ಆರ್ಯಭಟರು. ಖಗೋಳ ಶಾಸ್ತ್ರಕ್ಕೆ ಈತನ ವೈಜ್ಞಾನಿಕ ವಿಚಾರವೇ ಬುನಾದಿಯಾಗಿದ್ದು, ಕ್ರಿ.ಶ. 475ರಲ್ಲಿ ಜೀವಿಸಿದ್ದನು. ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದ ಪಂಡಿತರಾಗಿದ್ದರು. ಗಣಿತ, ಬೀಜಗಣಿತ, ತ್ರಿಕೋನಮಿತಿ ಹೀಗೆ ಗಣಿತದ ವಿವಿಧ ಪ್ರಕಾರಗಳಲ್ಲಿ ಮಂಡಿಸಿದ ವಿಚಾರ ಹಾಗೂ ಸೂತ್ರಗಳು ಇಂದಿಗೂ ತಮ್ಮ ಮೌಲಿಕತೆಯನ್ನು ಕಳೆದುಕೊಂಡಿಲ್ಲ. ಈತನ ಬಗ್ಗೆ ವಿವರಣೆ ಹಾಗೂ ಆತನ ಗಣಿತ ಹಾಗೂ ಖಗೋಲ ವಿಜ್ಞಾನ ಕುರಿತು ಇರುವ ವಿಶಾಲ ಹಾಗೂ ಅಗಾಧ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.