ಆಕಾಶವೇ ಒಂದು ಅದ್ಭುತಲೋಕ. ಆಕಾಶ ಕವಿಗಳನ್ನು ಪ್ರಚೋದಿಸಿದೆ, ವಿಜ್ಞಾನಿಗಳಿಗೆ ಸಂಶೋಧನೆಗೆ ಪ್ರೇರಣೆ ಕೊಟ್ಟಿದೆ. ವಿಶೇಷವಾಗಿ ಉಲ್ಕೆಗಳು, ಧೂಮಕೇತುಗಳು ಆಕಾಶಕಾಯಗಳ ಪೈಕಿ ಬಹು ಹೆಚ್ಚು ಆಕರ್ಷಣೆ ಗಳಿಸಿವೆ. ಹಾಗೆಯೇ ಕ್ಷುದ್ರಗ್ರಹಗಳ ಪ್ರಪಂಚವು ಕೂಡ. ಈ ಪುಸ್ತಕದಲ್ಲಿ ಕಲ್ಪನೆಯಿಂದ ತೊಡಗಿ ವಾಸ್ತವತೆಯವರೆಗೆ ಆಕಾಶಕಾಯಗಳ ಬಗ್ಗೆ ಕುತೂಹಲಕಾರಿ ಅಂಶಗಳು ಪ್ರತಿಪುಟದಲ್ಲೂ ತೆರೆದುಕೊಳ್ಳುತ್ತವೆ.
ವಿಶೇಷವಾಗಿ ಕ್ಷುದ್ರಗ್ರಹ ಬಡಿದು ಆರೂವರೆ ಕೋಟಿ ವರ್ಷಗಳ ಹಿಂದೆ ಜಗತ್ತನ್ನು ಆಳುತ್ತಿದ್ದ ಡೈನೋಸಾರ್ ಗಳು ಹೇಗೆ ನಾಮಾವಶೇಷವಾಗಿ ಹೋದವು ಎಂಬ ಬಗ್ಗೆ ರೋಚಕ ಅಧ್ಯಾಯವಿದೆ. ಅಲ್ಲದೆ, ಉಲ್ಕೆಗಳಿಂದ ನಮಗೆ ಭೂಮಿಯ ಜೀವಿ ವಿಕಾಸ ಕುರಿತು ಯಾವ ಬಗೆಯ ಮಾಹಿತಿ ನಿರೀಕ್ಷಿಸಬಹುದು ಎಂಬುದನ್ನು ಕುರಿತು ಅಷ್ಟೇ ಕುತೂಹಲಕಾರಿ ವಿವರಣೆ ಈ ಕೃತಿಯಲ್ಲಿದೆ. ಈ ಕೃತಿ ತೆರೆದುಕೊಳುವುದೇ ಕಲ್ಪನಾ ವಿಲಾಸದಿಂದ. ಆಗಸದ ತೊಟ್ಟಿಲಿನಿಂದ ವಿಜ್ಞಾನಿಗಳ ಮುಷ್ಟಿಗೆ, ಆದಿಪುರಾಣ, ಕ್ಷುದ್ರಗ್ರಹಗಳ ರುದ್ರನಾಟ್ಯ, ಗಡಿನಾಡಿನ ಕ್ಷಿಪಣ ಗಳು ಧೂಮಕೇತು, ಧರೆಗಿಳಿದ ದೂತರು, ಜೀವದ ಪುಟ್ಟಗಂಟು, ಇಸಾಶೆನ್ ಎಂಬ ಷೆರ್ಲಾಕ್ ಹೋಂ, ಸಮರಾಂಗಣದಲ್ಲೊಂದು ಸುತ್ತು, ಕುಳಿ-ಸಾಕ್ಷಿಗಳ ಓಕುಳಿ, ಮೆಕ್ಸಿಕೋದಲ್ಲಿ ಅಡಗುತಾಣ, ಧರೆಯ ಒಡಲಿಗೆ ಜೀವ ಬೀಜ- ಈ ಅಧ್ಯಾಯಗಳಲ್ಲಿ ನಿಮ್ಮನ್ನು ಮನ ತಣಿಸುವ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ ವಸ್ತುಗಳಿವೆ. ಹಾಗೆಯೇ ಆಕರ್ಷಕ ನಿರೂಪಣೆಯೂ ಇದೆ.
©2024 Book Brahma Private Limited.