ಚಂದ್ರನ ಮೇಲೆ ಮಾನವ ನಿಂತು ಪ್ರಸಕ್ತ (2019) ವರ್ಷದ ಜುಲೈ 20ಕ್ಕೆ ಸರಿಯಾಗಿ 50 ವರ್ಷ ತುಂಬಿತು. ಚಂದ್ರನ ಮೇಲೆ ನಡೆದ 12 ಗಗನಯಾನಿಗಳ ಬಗ್ಗೆ ಈ ಕೃತಿಯು ಹೊಸ ಮಾಹಿತಿಗಳನ್ನು ನೀಡುತ್ತದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕದ ಟಂಕಸಾಲೆಗಳು ಸುವರ್ಣ ಮಹೋತ್ಸವದ ಅಂಗವಾಗಿ ಬಗೆಬಗೆಯ ನಾಣ್ಯಗಳನ್ನು ಅಚ್ಚು ಹಾಕಿ ಮಾರಾಟಕ್ಕೆ ಬಿಟ್ಟಿವೆ. ಇಂಥ ಹಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ಹಾಗೂ ಅಂತರಿಕ್ಷದ ಯುಗದ ಆರಂಭದಿಂದ ಈವರೆಗೆ ಚಂದ್ರಶೋಧ ಕುರಿತು ಹಲವು ಮಾಹಿತಿಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.
ಚಂದ್ರನ ಮೇಲೆ ಮತ್ತೊಮ್ಮೆ
ಚಂದ್ರನು ಮನುಷ್ಯನ ಕುತೂಹಲ ಕೆರಳಿಸಿದ ಪರಿ ಅಷ್ಟಿಷ್ಟಲ್ಲ. ಪೌರಾಣಿಕವಾಗಿಯೂ, ವೈಜ್ಞಾನಿಕವಾಗಿಯೂ, ಸಾಹಿತ್ಯಕವಾಗಿಯೂ ಚಂದ್ರನ ಕುರಿತು ಸಾಕಷ್ಟು ಚರ್ಚೆ, ಜಿಜ್ಞಾಸೆ ನಡೆದಿದೆ. ಹಿರಿಯ ಲೇಖಕ ಟಿ.ಆರ್.ಅನಂತರಾಮು ಅವರು ಈ ಪುಸ್ತಕದಲ್ಲಿ ಚಂದ್ರ ಕುರಿತಾದ 10 ಲೇಖನಗಳನ್ನು ಮತ್ತು ಕೆಲವು ಕವನಗಳನ್ನು ಸಂಕಲಿಸಿದ್ದಾರೆ. ಚಂದ್ರನ ಮೇಲೆ ಮಾನವನು ಹೆಜ್ಜೆಯೂರಿ ಐವತ್ತು ವರ್ಷಗಳಾದ ಸಂದರ್ಭದಲ್ಲಿ ಹೊರಬಂದ ಈ ಪುಸ್ತಕವು, ಹಲವು ಉಪಯುಕ್ತ, ಕುತೂಹಲಕಾರಿ ಮತ್ತು ಚಿಂತನೆಗೆ ಹಚ್ಚುವ ಬರಹಗಳನ್ನು ಹೊಂದಿದ್ದು, ಮಕ್ಕಳ ಜತೆ ದೊಡ್ಡವರಿಗೂ ಅಚ್ಚು ಮೆಚ್ಚು ಆಗಬಲ್ಲದು. 'ಅಪೋಲೋ 11ರಲ್ಲಿ ಯಾನ ಆಡಿದ ಆರ್ಮ್‌ಸ್ಟಾಂಗ್ ಮತ್ತು ಆಲ್ಲಿನ್ ಚಂದ್ರನ ಮೇಲೆ ಕಂಪನ ಮಾಪಕವನ್ನು ಇಟ್ಟು ಬಂದಿದ್ದಾರೆ. ಅದರಲ್ಲಿ ಸಣ್ಣ ಕಂಪನಗಳು ದೀರ್ಘಕಾಲ ಆಗಿರುವುದು ದಾಖಲೆಯಾಗಿದೆ. ಇದರರ್ಥವೇನು? ಚಂದ್ರನ ಗರ್ಭವೂ ಭೂಮಿಯ ಗರ್ಭದಂತೆ ಪ್ರತ್ಯೇಕಗೊಂಡ ಭಾಗಗಳನ್ನು ಮುಚ್ಚಿ ಟ್ಟುಕೊಂಡಿದೆಯೆ?'. ಇಂತಹ ಹಲವು ಕುತೂಹಲಕಾರಿ ಚರ್ಚೆಗಳು ಇಲ್ಲಿವೆ.
ಕೃಪೆ : ವಿಶ್ವವಾಣಿ 2020 ಜನವರಿ 05
©2024 Book Brahma Private Limited.