ಖಗೋಳ ಯಾವತ್ತಿಗೂ ಮನುಷ್ಯನ ಕುತೂಹಲದ ಕೇಂದ್ರ. ಆದಿಮ ಕಾಲದಿಂದಲೂ ಮನುಷ್ಯ ಆಕಾಶದ ಕಡೆಗೆ ಒಂದು ದೃಷ್ಟಿ ನೆಟ್ಟೇ ಇರುವವನು. ವಿಜ್ಞಾನ ಬೆಳೆದಂತೆಲ್ಲಾ ಮನುಷ್ಯನ ಕೌತುಕದ ಅಂತರಿಕ್ಷ ಮತ್ತೂ ವಿಸ್ತರಿಸಿಕೊಳ್ಳುತ್ತಿದೆ. ಅಂತಹ ಅನಂತ ಆಕಾಶವನ್ನು ಕನ್ನಡದ ವಿಜ್ಞಾನಾಸಕ್ತರಿಗೆ ಪರಿಚಯಿಸುವ ಕೃತಿ ’ಆಕಾಶದಲ್ಲಿ ಏನಿದೆ? ಏಕಿದೆ?’
ಬರಿಗಣ್ಣು ಅಥವಾ ಸರಳ ಸಾಧನಗಳನ್ನು ಬಳಸಿ ಆಕಾಶವನ್ನು ಅಧ್ಯಯನ ಮಾಡುವುದರ ಕುರಿತು ಲೇಖಕಿ ಚರ್ಚಿಸಿರುವುದು ಕೃತಿಯ ವಿಶೇಷ. ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಕೆರಳಿಸಲು ಪೋಷಕರಿಗೆ ಅನುಕೂಲವೊದಗಿಸುವ ಗ್ರಂಥವೂ ಹೌದು.
ಕೃತಿ ಹದಿಮೂರು ಅಧ್ಯಾಯಗಳನ್ನು ಒಳಗೊಂಡಿದ್ದು ಲೆಂಡರ್‌ಗಳು, ಗ್ರಹಣಗಳು, ಗ್ರಹಣ ವೀಕ್ಷಣೆಯ ಮೋಜು, ಉಲ್ಕೆಗಳು, ಧೂಮಕೇತುಗಳು, ನಕ್ಷತ್ರಗಳು, ನಕ್ಷತ್ರ ಪುಂಜಗಳು, ಆಕಾಶಕ್ಕೆ ನಮ್ಮ ಕೊಡುಗೆ, ಅತೀ ಸಮೀಪದ ನಕ್ಷತ್ರ –ಸೂರ್ಯನ ವಿವರಗಳನ್ನು ಒದಗಿಸುತ್ತದೆ.
ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಬಿಸಲೇರಿ ಜಯಣ್ಣ ಮತ್ತು ಬಿಸಿಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ ದೊರೆತಿದೆ.
©2024 Book Brahma Private Limited.