ವಿಜ್ಞಾನ ಲೇಖಕ ಡಾ. ಎಂ.ಎಸ್.ಎಸ್. ಮೂರ್ತಿ ಅವರ ಕೃತಿ-ಅಗೋಚರ ಸೂರ್ಯ. ಸೂರ್ಯನ ಕುರಿತು ಧಾರ್ಮಿಕ ವಿವರಣೆ ಮಾತ್ರವಲ್ಲ; ವೈಜ್ಞಾನಿಕವಾಗಿ ಸಂಶೋಧನೆ ನಡೆಯುತ್ತಲೇ ಇದೆ. ಸೂರ್ಯನ ಶಾಖ, ಸೂರ್ಯನ ಸುತ್ತಲು ಭೂಮಿಯು ಒಳಗೊಂಡಂತೆ ಸುತ್ತುವ ಗ್ರಹಗಳು, ಸೂರ್ಯನ ಬಳಿ ಹೋಗಲಾಗುತ್ತಿಲ್ಲವೇಕೆ? ಇದು ಅಸಾಧ್ಯವೆ? ಅನಿಲಗಳ ಪಾತ್ರವೇನು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಉತ್ತರಿಸುವ ಜಾಣ್ಮೆ ಈ ಕೃತಿಯ ವಿವರಣೆಯಲ್ಲಿದೆ.
ಅಗೋಚರ ಸೂರ್ಯ ಕೃತಿಯ ವಿಮರ್ಶೆ
ಗೋಚರ ಸೂರ್ಯನೇ ಪ್ರತ್ಯಕ್ಷ ಕಾಣುತ್ತಿರುವಾಗ ಇದೇನಿದು ಅಗೋಚರ ಸೂರ್ಯ? ಹೌದು, ಸೂರ್ಯನಲ್ಲಿ ನಾವು ಕಾಣುವ ಗೋಚರ ಬೆಳಕಲ್ಲದೆ ಅಸಂಖ್ಯ ಅಗೋಚರ ತರಂಗಾಂತರಂಗಗಳ ಆದೃಶ್ಯ ಕಿರಣಗಳೂ ಇವೆ. ಪೂರ್ಣ, ಸೂರ್ಯಗ್ರಹಣದ ಸಮಯ ಕೆಲವರಿಗೆ ನೋಡಬಾರದ ಅಪಶಕುನದ ಗಳಿಗೆಯಾದರೆ ವಿಜ್ಞಾನಿಗಳಿಗೆ ಅದು ಸೂರ್ಯನ ಅಧ್ಯಯನಕ್ಕೆ ಸರಿಯಾದ ಸುಮುಹೂರ್ತ! ಇಂಥ ಕೆಲವೇ ಕ್ಷಣಗಳ ವೀಕ್ಷಣೆಯಲ್ಲಿ ಸೂರ್ಯನ ಅಪೂರ್ವ ಮಾಹಿತಿಗಳು ವಿಜ್ಞಾನಿಗಳಿಗೆ ಲಭ್ಯವಾಗಿವೆ. ಸೂರ್ಯನ ಪ್ರಭಾಗೋಳ, ಸೌರಕಲೆ, ಸೌರಜ್ಜಾಲೆ, ಆಳದಲ್ಲಿ ಉತ್ಪತ್ತಿಯಾಗಿ ದಶದಿಕ್ಕುಗಳಿಗೂ ಹರಡುವ ಬೆಳಕಿನ ಕಿರಣಗಳು ಇಂದು ವಿಶೇಷ ಅಧ್ಯಯನಕೊಳಗಾಗಿದೆ. ಕೇವಲ ನೂರು ವರ್ಷ ಆಯುಸ್ಸು ಇರಿಸಿಕೊಂಡು ಸೂರ್ಯನ ಉಗಮ ಮಾತ್ರವಲ್ಲ, ಆತನ ಅವಸಾನ ಯಾವಾಗ ಎಂಬುದನ್ನೂ ವಿಜ್ಞಾನಿಗಳು ಹೇಳುತ್ತಿದ್ದಾರೆ. ಸೂರ್ಯನನ್ನು ವಿಜ್ಞಾನಿಗಳು ಎಷ್ಟು ಕಾಡುತ್ತಿದ್ದಾರೆಂದರೆ ಇದೀಗ “ಪಾರ್ಕರ್ ಸೋಲಾರ್ ಪೊಬ್” ಎಂಬ ಗಗನ ನೌಕೆಯೊಂದನ್ನು ನಾಸಾ ಸೂರ್ಯನೆಡೆಗೆ ಉಡಾಯಿಸಿದ್ದು ಸೂರ್ಯನ ಸಮೀಪಕ್ಕೆ ತಲುಪಿ ಮಾಹಿತಿ ರವಾನಿಸಲಿದೆಯಂತೆ! ಈ ಕಥಾನಕವನ್ನು ಅವಶ್ಯವಾಗಿ ಓದಿ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವ ಸದವಕಾಶ ನಿಮ್ಮ ಮುಂದಿದೆ.
(ಕೃಪೆ; ಓದುಬರಹ)
©2024 Book Brahma Private Limited.