ಹದಿನೈದು ಮತ್ತು ಹದಿನಾರನೇ ಶತಮಾನದ ನಡುವೆ ಬದುಕಿದ್ದ ನಿಕೋಲಸ್ ಕೊಪರ್ನಿಕಸ್ ಆಧುನಿಕ ಖಗೋಳ ವಿಜ್ಞಾನದ ಪಿತಾಮಹ ಎನಿಸಿಕೊಂಡವನು.
ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ ಎಂದು ಸತ್ಯ ಹೇಳಿ ಪುರೋಹಿತ ಶಾಹಿಗಳನ್ನು ಎದುರುಹಾಕಿಕೊಂಡ ಕೊಪರ್ನಿಕಸ್ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಈಗ ಸೂರ್ಯನೇ ಸೌರ ಮಂಡಲದ ಕೇಂದ್ರ ಎಂದು ಎಲ್ಲರೂ ಒಪ್ಪಿದ್ದಾರೆ. ಅವನು ಹಚ್ಚಿದ ಖಗೋಳ ಕ್ರಾಂತಿಯ ಕಿಡಿ ಇಂದು ಹಣತೆಯಾಗಿ ಬೆಳಗುತ್ತಿದೆ. ಇದನ್ನೆಲ್ಲಾ ವಿವರಿಸುವ ಯತ್ನವೇ ’ಕೊಪರ್ನಿಕಸ್ ಕ್ರಾಂತಿ’.
ಕಾಲ ಮತ್ತು ದೇಶ ಎರಡರಲ್ಲಿಯೂ ಅತಿ ದೂರದವನಾದ ನಿಕೋಲಾಸ್ ಕೊಪರ್ನಿಕಸ್ (1473-1543) ಭಾರತದಲ್ಲಿ ವಾಸಿಸುವಂತಹ ನಮ್ಮಂಥವರಿಗೆ ಅರ್ಥಪೂರ್ಣ ಎನಿಸುವುದೇಕೆ? ಅವನು ನಮ್ಮ ಚಿಂತನೆಗೆ ಖಚಿತ ತಿರುವು ಮತ್ತು ಚಾಲನೆಯನ್ನು ಹೇಗೆ ನೀಡಿದ ಎಂಬುದನ್ನೂ ಕೃತಿ ವಿವರಿಸುತ್ತದೆ.
©2025 Book Brahma Private Limited.