ಡಾ. ವಿ. ಶ್ರೀನಿವಾಸ ಚಕ್ರವರ್ತಿ ಅವರ ಮೂಲ ಕೃತಿಯನ್ನು ಲೇಖಕ ಎಂ.ಎಲ್. ರಾಘವೇಂದ್ರರಾವ್ ಅವರು ಕನ್ನಡಕ್ಕೆ ಮೂರು ಹೆಜ್ಜೆಗಳಲ್ಲಿ ವಿಶ್ವ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ವಿಶ್ವವನ್ನು ಅಳೆಯುವ ಸಾಹಸ ಯಾತ್ರೆಯಲ್ಲಿ ಅನಾವರಣಗೊಂಡ ಖಗೋಳ ರಹಸ್ಯಗಳ ಮಾಹಿತಿ ಈ ಕೃತಿಯಲ್ಲಿದೆ. ಈ ವಿಶ್ವ ರೂಪುಗೊಂಡ ಬಗೆ ಹೇಗೆ, ಮನುಷ್ಯರಿರುವ ಭೂಮಿಯಿಂದ ಗಗನಕ್ಕಿರುವ ಅಂತರ ಎಷ್ಟು? ಬೆಳಕಿನ ವರ್ಷ, (ಜ್ಯೋತಿರ್ವರ್ಷ) ಎಂದರೇನು? ಗ್ರಹಗಳಿಗೂ, ಭೂಮಿಗೂ ಇರುವ ಅಂತರವನ್ನು ಕಂಡುಕೊಳ್ಳಲು ಅನೇಕ ಖಗೋಳ ವಿಜ್ಞಾನಿಗಳು ನಡೆಸಿದ ಸಂಶೋಧನೆಗಳು, ಅವರು ಬಳಸಿದ ಅಳತೆಗೋಲುಗಳ ಬಗ್ಗೆ ಪರಿಚಯಿಸುವುದರ ಜೊತೆಗೆ ಖಗೋಳ ವಿಜ್ಞಾನದ ಕುರಿತು ಅನೇಕ ಆಸಕ್ತಿಕರ ಅಂಶಗಳು ಖಗೋಳ ವಿಜ್ಞಾನದ ಆಸಕ್ತರಿಗೆ ಈ ಕೃತಿಯಲ್ಲಿ ಪರಿಚಯವಾಗಲಿದೆ. - See more at: https://amulyapustaka.myinstamojo.com/-39891/p3382130/#sthash.N1ySuDVY.dpuf
©2024 Book Brahma Private Limited.