ಹಿರಿಯ ಲೇಖಕ ಪಾಲಹಳ್ಳೀ ವಿಶ್ವನಾಥ ಅವರು ರಚಿಸಿದ ಕೃತಿ-ಯಾಮಿನಿಯ ಯಾತ್ರಿಕರು. ವಿಜ್ಞಾನ ಲೇಖನಗಳ ಸಂಕಲನವಿದು. ಬಾಹ್ಯಾಕಾಶ ವಿಶೇಷವಾಗಿ ನಕ್ಷತ್ರ ಪುಂಜಗಳು, ನಕ್ಷತ್ರಗಳ ವಿಂಗಡಣೆ, ನಕ್ಷತ್ರಗಳ ದೂರ ಇತ್ಯಾದಿ ಕುರಿತಂತೆ ಈವರೆಗೆ ನಡೆದ ಸಂಶೋಧನೆಗಳು, ಈ ಕ್ಷೇತ್ರದಲ್ಲಿ ಗಣನೀಯವಾಗಿ ಸಂಶೋಧನೆ ಮಾಡಿದ ವಿಜ್ಞಾನಿಗಳು ಸೇರಿದಂತೆ ವೈಜ್ಞಾನಿಕವಾದ ಮಾಹಿತಿಗಳನ್ನು ಒಳಗೊಂಡ ಕೃತಿ ಇದು. ವಿಜ್ಞಾನ ಬರಹಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪಾಲಹಳ್ಳಿ ವಿಶ್ವನಾಥ ಅವರ ಈ ಕೃತಿಯು ಅವರ ಅಧ್ಯಯನದ ಆಳಕ್ಕೆ ಕನ್ನಡಿ ಹಿಡಿಯುತ್ತದೆ. ಇಂತಹ ವಿಷಯಗಳನ್ನು ಆಧರಿಸಿ ಬರೆಯುತ್ತಿದ್ದ ಅಂಕಣಗಳ ಬರಹಗಳನ್ನು ಕೃತಿಯಲ್ಲಿ ಸಂಕಲಿಸಲಾಗಿದೆ.
ಪರಿವಿಡಿಯಲ್ಲಿ ಐಸಾಕ್ ನ್ಯೂಟನ್: ವಿವಿಧ ಗೀಳುಗಳು , ನ್ಯೂಟನ್ ಮಹಾಶಯನನ್ನು ಕೆಣಕಬೇಡಿ, ಸಂಗೀತಗಾರ ವಿಲಿಯಂ ಹರ್ಷಲ್ , ಆಲ್ಬರ್ಟ್ ಐನ್‌ಸ್ಟೈನ್: ಕುಟುಂಬ ಜೀವನ ,ಐನ್‌ಸ್ಟೈನ್: ಮೇಧಾವಿಯ ಮೆದುಳು, ಫೈನ್‌ಮನ್ : ಹಾಸ್ಯ ಪ್ರಜ್ಞೆ, ಸ್ಟೀಫನ್ ಹಾಕಿಂಗ್ : ದೈಹಿಕ ದೌರ್ಬಲ್ಯಗಳ ವಿಜಯಿ, ಯುವ ಕುಲೀನ ವಿಜ್ಞಾನ ವಿಕ್ರಮ್ ಸಾರಾಭಾಯ್ ಚರಿತ್ರೆ, ಮೂಲಭೂತ ವಿಜ್ಞಾನದ ವಿವಿಧ ಮುಖಗಳು, ಸೂರ್ಯಕೇಂದ್ರೀಯ ಸಿದ್ಧಾಂತದ ವಿಕಸನ , ಪುರಾತನ ಪಾಶ್ಚಾತ್ಯ ನಾಗರಿಕತೆಗಳಲ್ಲಿ ಖಗೋಳವಿಜ್ಞಾನ, ಹಿರೋಷಿಮಾ ಪರಮಾಣು ಬಾಂಬ್‌ಚರಿತ್ರೆ ಚಂದ್ರನ ಮೇಲೆ ಮಾನವ: ಅರ್ಧ ಶತಮಾನದ ಹಿಂದಿನ ನೆನಪುಗಳು, ಫರ್ಮಿ ಸಮಸ್ಯೆ ಮತ್ತುಏಲಿಯನ್ಸ್ ಸಿನಿಮಾಗಳು ,ಯಾಮಿನಿಯ ಯಾತ್ರಿಕರು ಪರಿವಿಡಿಯಲ್ಲಿ ವಿವರಿಸಲಾಗಿದೆ.
©2024 Book Brahma Private Limited.