ಗ್ರಹಣ ಎಂಬುದು ಅಪ್ಪಟ ಖಗೋಳ ವಿದ್ಯಮಾನ. ಅದರಿಂದ ಯಾವುದೇ ತೊಂದರೆ ಇಲ್ಲ ಎಂಬ ವೈಚಾರಿಕ ಸ್ಪಷ್ಟತೆ ಹೊಂದಿರುವ ವಿಜ್ಞಾನದ ಪುಸ್ತಕ ”ಬಾನ ಬಯಲಾಟ: ಗ್ರಹಣ’
ಶೀರ್ಷಿಕೆಯೇ ಹೇಳುವಂತೆ ಇದು ಆಕಾಶವೇ ಹೂಡಿದ ಆಟ. ಅಲ್ಲಿಗೆ ಗ್ರಹಣದ ಬಗ್ಗೆ ಭಯ ಬೇಡ ಎಂಬುದನ್ನು ಲೇಖಕರು ಶೀರ್ಷಿಕೆಯ ಮೂರೇ ಪದಗಳಲ್ಲಿ ಸೂಚ್ಯವಾಗಿ ವಿವರಿಸಿದ್ದಾರೆ.
ಚಂದ್ರಗ್ರಹಣ, ಸೂರ್ಯಗ್ರಹಣದ ವಿವರಗಳು, ಆ ಸಂದರ್ಭದಲ್ಲಿ ಭೂಮಿ ಸೇರಿದಂತೆ ಆಕಾಶಕಾಯಗಳಲ್ಲಿ ಆಗುವ ಬದಲಾವಣೆಗಳನ್ನು ಕೃತಿ ಹೇಳುತ್ತದೆ. ’ನಮ್ಮ ವರ್ತಮಾನ ಭವಿಷ್ಯಗಳನ್ನು ಗ್ರಹಣ ನಿರ್ಧರಿಸುವುದಿಲ್ಲ. ನಾವೇ ನಮ್ಮ ವರ್ತಮಾನದ ನಿರ್ಮಾಪಕರು ಮತ್ತು ಭವಿಷ್ಯ ನಿರ್ಧಾರಕರು. ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ ವ್ಯಕ್ತಿಯ ಬುದ್ದಿಗ್ರಹಣಕ್ಕೆ ಕಾರಣವಾಗಬಾರದು, ಬುದ್ಧಿ ಪ್ರಜ್ವಲನೆಗೆ ಪ್ರೇರಕವಾಗಬೇಕು’ ಎಂಬ ಆಶಯ ಕೃತಿಯದ್ದು.
©2024 Book Brahma Private Limited.