ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ ಎನ್ನುವ ಪುಟ್ಟ ಕೃತಿಯ ಮೂಲಕ ಡಾ. ಎಸ್.ಎಂ. ಬಾಲಚಂದ್ರರಾವ್ ಅವರು ಕೆಲವು ಕುತೂಹಲಕಾರಿ ಅಂಶಗಳನ್ನು ಮಂಡಿಸಿದ್ದಾರೆ. ಒಂದೆಡೆ ಕೀಳರಿಮೆ, ಮಗದೊಂದೆಡೆ ಅತಿ ವೈಭವೀಕರಣ ಇವುಗಳ ನಡುವೆ ಭಾರತದ ಪ್ರಾಚೀನ ಕಾಲದಲ್ಲಿ ನಿಜಕ್ಕೂ ಪ್ರತಿಪಾದಿಸಿದ ಕೆಲವು ವಿಷಯಗಳು ನಗಣ್ಯವಾಗುತ್ತಿದೆ. ಅವುಗಳನ್ನು ಮುಂದಿಡುವ ಪ್ರಯತ್ನವನ್ನು ರಾವ್ ಮಾಡಿದ್ದಾರೆ. ಎರಡು ವಿರುದ್ಧ ಧೋರಣೆಗಳನ್ನು ತೊರೆದು ವಾಸ್ತವವಾಗಿ ಭಾರತೀಯರು ಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರಗಳಿಗೆ ನೀಡಿದ ವಿಶಿಷ್ಟ ಕೊಡುಗೆಯನ್ನು ಸ್ಕೂಲವಾಗಿ, ವಿಮರ್ಶಾತ್ಮಕವಾಗಿ ಪರಿಚಯಿಸಲು ಈ ಕೃತಿಯಲ್ಲಿ ಯತ್ನಿಸಿದ್ದಾರೆ. ಮಾಯಾ ಚೌಕಗಳು, ಕ್ಯಾಲೆಂಡರ್ ಹಾಗೂ ರಾಷ್ಟ್ರೀಯ ಪಂಚಾಂಗ, ಸೊನ್ನೆಯ ಸ್ವಾರಸ್ಯ, ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ ಪರಂಪರೆ, ಮಹಾವೀರಾಚಾರ್ಯ ಮತ್ತು ಭಾಸ್ಕರಾಚಾರ್ಯ, ವೇದಿಕ್ ಮ್ಯಾಥಮೆಟಿಕ್ಸ್, ಪಾರಸೀ-ಸಂಸ್ಕೃತ ಮಣಿಪ್ರವಾಳ, ರಾಮಾಯಣದಲ್ಲಿ ಗ್ರಹಗತಿ, ಶುಕ್ರ ಸಂಕ್ರಮಣ ಮುಂತಾದವುಗಳು ಈ ಹೊತ್ತಿಗೆಯಲ್ಲಿರುವ ಕುತೂಹಲಕರ ಬರಹಗಳು.
©2024 Book Brahma Private Limited.