ಒಂದೆಡೆ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು, ಅದಕ್ಕೊಂದು ಸೈದ್ಧಾಂತಿಕ ಚೌಕಟ್ಟು ಹಾಕಲು ಯತ್ನಿಸುತ್ತಲೇ ಇರುವ ಮನುಷ್ಯ; ಮತ್ತೊಂದೆಡೆ ಮನುಷ್ಯನ ನಿರ್ಧಾರಗಳನ್ನು ತಲೆಕೆಳಗು ಮಾಡುವ ಪ್ರಕೃತಿ. ಇದೊಂದು ರೀತಿ ನಿಸರ್ಗ ಮತ್ತು ಮಾನವನ ನಡುವಿನ ಹಾವು ಏಣಿ ಆಟ.
ಅಂತಹ ಸ್ವಾರಸ್ಯಗಳನ್ನು ಖಗೋಳ ವಿಜ್ಞಾನದ ಮೂಲಕ ಹೇಳುವ ಯತ್ನ ಜಿಟಿನಾ ಅವರದು. ಅವರು ನಿಸರ್ಗದ ಅಗೋಚರ ಕಾಯಗಳ ಬಗೆಗಿನ ಮಾಹಿತಿಯನ್ನು ’ಕೃಷ್ಣ ವಿವರಗಳು’ ಕೃತಿಯಲ್ಲಿ ವಿವರಿಸಿದ್ದಾರೆ. ವಿಜ್ಞಾನದ ವರ್ಣನೆಯಿಂದ ನುಣುಚಿಕೊಳ್ಳುವ ಇವುಗಳ ಅಸ್ತಿತ್ವವನ್ನು ವಿಶ್ಲೇಷಿಸಿದ್ದಾರೆ.
©2025 Book Brahma Private Limited.