ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಎನ್.ಆರ್. ನಾಯಕರು ಜಾನಪದ ವಿದ್ವಾಂಸರಾಗಿ ಬಹುಮುಖ ಸಾಧನೆ ಮಾಡಿದ್ದಾರೆ. ಉತ್ತರ ಕನ್ನಡದ ಜಾನಪದ ವಾಗ್ಮಯವನ್ನು ಕನ್ನಡ ಲೋಕಕ್ಕೆ ಒದಗಿಸಿಕೊಟ್ಟ ಎನ್. ಆರ್ ನಾಯಕರು ಕವಿಯಾಗಿಯೂ ತಮ್ಮ ಸೃಜನಶೀಲತೆಯನ್ನು ಪ್ರಕಟಿಸಿದ್ದಾರೆ. ಸಾಲ ಸಂಪೀಗೆ ಗಮ್ಮೆಂದೊ ಕೃತಿಯನ್ನು ಹೆಸರಾಂತ ಲೇಖಕಿ ಕಮಲ ಹೆಮ್ಮಿಗೆ ರಚಿಸಿದ್ದಾರೆ. ಕಮಲ ಅವರು ಹೇಳಿದಂತೆ ನಾಯಕರ ಕವಿತೆಗಳಲ್ಲಿ ಹೃದಯದ ಉಲ್ಲಾಸವಿದೆ. ದಲಿತಪರ ಸಾಮಾಜಿಕ ಕಾಳಜಿ ಇದೆ. ಜಾನಪದ ದೀಪಾರಾಧನೆಯ ಬೆಳ್ಳಿ ಬೆಳಕನ್ನು ನಾಡಿನಾದ್ಯಂತ ಹರಡಿರುವ ಎನ್.ಆರ್ ನಾಯಕರು ನವೋದಯ, ನವ್ಯ ಪರಂಪರೆಯನ್ನು ಸಮಭಾವದಿಂದ ಸ್ವೀಕರಿಸಿದವರು. ಕಮಲ ಹೆಮ್ಮಿಗೆ ಎನ್. ಆರ್ ನಾಯಕರ ಪಂಚ ಕಾವ್ಯದ ಪರಿಮಳವನ್ನು ಸಹೃದಯರು ಆಸ್ವಾದಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕರ ಕಾವ್ಯದ ಬಗೆಗೆ ತಾಳಿರುವ ಕಾವ್ಯಾಸಕ್ತಿ ಈ ಪುಸ್ತಕದಲ್ಲಿ ಅನಾವರಣಗೊಂಡಿದೆ ಎಂದು ಜಿ.ಎಂ ಹೆಗಡೆ ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.