‘ಹೂ ಕೊಡುವ ಹಾಡು’ ಕವಿ ಸ. ರಘುನಾಥ ಅವರ ಸಮಗ್ರ ಕವಿತೆಗಳ ಸಂಕಲನ. ಸ. ರಘುನಾಥ ಸಮಗ್ರ ಸಾಹಿತ್ಯ ಸಂಪುಟ-2ರ ಭಾಗವಾಗಿ ಈ ಕೃತಿ ಪ್ರಕಟಗೊಂಡಿದೆ. ಗತಿ (1982),ಕೇವಲ ಮೂರು ಕವಿತೆಗಳಿವೆ. ಅಭಿಮುಖ (1987) 20 ಕವಿತೆಗಳು, ದಾರಿ ಮತ್ತು ಆಕಾಶ (1991) 30 ಕವಿತೆಗಳು, ಶಬ್ದ ಕಣ್ಣಿನ ನಡುವೆ (2003) 30 ಕವಿತೆಗಳು, ಬಿಸಿಲ ನೆಲ (2005) 30 ಕವಿತೆಗಳು, ಹೆಜ್ಜೆ ಮೂಡಿಸುವ ಹಾದಿ (2009) 57 ಕವಿತೆಗಳು, ಸುರುಳಿ (2004) ಕವನ ಸಂಕಲನದಲ್ಲಿ ಕೃಷ್ಣನಿಗೆ, ನನ್ನೊಳಗೆ, 1-55 ಪದ್ಯಗಳು ಹಾಗೂ ಮತ್ತು ಹೀಗೆ ವಿವಿಧ ಭಾಗಗಳಿವೆ. ಕೂಡು (2006) ಕವನ ಸಂಕಲನದಲ್ಲಿ ಚಿತ್ರ ಬುತ್ತಿಯ ಬಿಚ್ಚು (ಭಾಗ-1), ಅಜ್ಜಿ ಕೊಟ್ಟ ಗೆಜ್ಜೆ ಪದ (ಭಾಗ-2), ನಮ್ಮೋರ ನುಡಿಯಾಗ ಪದಕಟ್ಟಿ( ಭಾಗ-3), ಕೂಡು ನಂತರದ ಕವಿತೆಗಳು (2017) 6 ಕವಿತೆಗಳಿವೆ. ಹೀಗೆ ಕಾಲಕ್ರಮದಲ್ಲಿ ಕವನ ಸಂಕಲನಗಳ ವಿವರ ನೀಡಿದ್ದು, ಕವಿಯ ಜಾಡು, ಮನಸ್ಥಿತಿಯ ಸ್ವರೂಪ ಇತ್ಯಾದಿ ಗ್ರಹಿಸಲು ಓದುಗರಿಗೆ ನೆರವಾಗುತ್ತದೆ. ಸ್ವತಃ ಲೇಖಕರು ‘ಬೆಳೆಯ ಕಾವಲು ಮಾತ್ರ ನನ್ನದು. ಬೆಳೆಯತ್ತ ನೋಡಬಾರದ ಕುರುಡ ನಾನು. ಅವರಿಗೆ ಮನಸ್ಸಾದರೆ ಅವರೇ ನೆರವಾಗಲಿ’ ಎಂದು ತಮ್ಮಕಾವ್ಯ ಸಾಹಿತ್ಯವನ್ನು ಓದುಗರ ವಿಮರ್ಶೆಗೆ ಬಿಟ್ಟಿದ್ದಾರೆ.
©2024 Book Brahma Private Limited.