ಒಳಗಿರುವ ಬೆಳಕು ಜಿ.ಎಂ ಹೆಗಡೆ ಅವರ ಕೃತಿಯಾಗಿದೆ. , ಜಿ.ಎಸ್. ಆಮೂರ ಅವರ ಭುವನದ ಭಾಗ್ಯ’ ಕನ್ನಡ ವಿಮರ್ಶೆಯ ಅಭಿಜಾತ ಕೃತಿಯಾಗಿದೆ ಬೇಂದ್ರೆ ಸಮಗ್ರ ಕಾವ್ಯದ ವಸ್ತು ಮತ್ತು ಆಕೃತಿಯ ಕೇಂದ್ರ ಪ್ರಮೇಯವನ್ನು ಗುರುತಿಸಿ ಅಭಿವ್ಯಕ್ತಿ ವೈವಿಧ್ಯವನ್ನು ಚಾರಿತ್ರಿಕ ಸಂದರ್ಭದಲ್ಲಿಟ್ಟು ನೋಡಿದ ಆಮೂರ ಅವರು ಶ್ರೇಷ್ಠವಾರ ವಿಮರ್ಶೆಯನ್ನು ನೀಡಿದ್ದಾರೆ, ಬೇಂದ್ರ ಸಾಹಿತ್ಯಾನುಸಂಧಾನ ಅಮೂರರ ಜೀವಿತದ ಗುರಿಯಾಗಿತ್ತು. ಈಗ ಪ್ರಕಟವಾಗುತ್ತಿರುವ ಆಮೂರರ ಅಂತಿಮ ಕೃತಿ ಒಳಗಿರುವ ಬೆಳಕು, ಗ್ರಂಥದ ನಂತರ ಬಂದ ಬೇಂದ್ರೆ ಸಮಗ್ರ ವಿಮರ್ಶಾ ಲೇಖನಗಳ ಸರಕಾಗಿದೆ. ಒಳಗಿರುವ ಬೆಳಕು. ಗ್ರಂಥದ ಮೊದಲ ಭಾಗ ಬೇಂದ್ರೆ ಕಾವ್ಯಕ್ಕೆ ಪ್ರವೇಶ ಎಂಬುದಾಗಿದ್ದು ಅದರಲ್ಲಿ ಬೇಂದ್ರೆ ಕವಿವ್ಯಕ್ತಿತ್ವದ ವಿಭಿನ್ನ ಮುಖಗಳ ಸುಂದರ ಚಿತ್ರಗಳಿವೆ. ಬೇಂದ್ರೆಯವರ ಜೀವನ ಪ್ರಜ್ಞೆ ಸಾಮರಸ್ಯದ ಶೋಧ, ಕಾವ್ಯಧರ್ಮ, ಪ್ರಜ್ಞೆ ಮತ್ತು ಪ್ರಯೋಗ, ಕಾವ್ಯಾನುಸಂಧಾನ ವಿಮರ್ಶಾ ಪರಂಪರೆ, ಮಾರ್ಕ್ಸ ಮತ್ತು ಬೇಂದ್ರೆ ಚಿಂತನ ಲೇಖನಗಳಿವೆ. ಬೇಂದ್ರೆ ಕಾವ್ಯದ ಕೆಲ ಮುಖಗಳು ಎಂಬ ಎರಡನೆಯ ಭಾಗದಲ್ಲಿ ಬೇಂದ್ರೆ ಕಾವ್ಯದ ಪ್ರತಿಮಾಲೋಕ, ಪ್ರಾವಣದ ಕವಿ ಬೇಂದ್ರ ಅಲ್ಲಮರು ವೈಚಾರಿಕತೆ, ಕವಿಗಳಲ್ಲಿ ಆನುಭಾವ – ವಿಷಯಗಳ ಲೇಖನಗಳಿವೆ. ಬೇಂದ್ರೆಯವರು ಶ್ರೇಷ್ಠ ಕದಿಯಾಗಿದ್ದಂತೆ ಶ್ರೇಷ್ಠ ಚಿಂತಕರೂ ಆಗಿದ್ದರು ಎಂಬುದನ್ನು ಆಮೂರರು ಒಳಗಿರುವ ಬೆಳಕು' ಕೃತಿಯ ಮೂರನೆಯ ಭಾಗದಲ್ಲಿ ವಿವೇಚಿಸಿದ್ದಾರೆ. ಬೇಂದ್ರೆಯವರ ಕಾವ್ಯತತ್ವ ವಿಚಾರಗಳನ್ನು ಅವರೇ ರಚಿಸಿದ ಕವಿತೆಗಳಿಗೆ ಅನ್ವಯಿಸಿ ನೋಡುವ ಚಿಂತನಶೀಲತೆ ಇಲ್ಲಿ ಪ್ರಕಟವಾಗಿದೆ. ಗ್ರಂಥದ ನಾಲ್ಕನೆಯ ಭಾಗದಲ್ಲಿ ಬಹುಭಾಷಾ ಕೋವಿದರಾಗಿದ್ದ ಬೇಂದ್ರೆಯವರು ಸಂಸ್ಕೃತ, ಮರಾಠಿ, ಇಂಗ್ಲೀಷ್, ಹಿಂದಿ, ಬಂಗಾಲಿ ಭಾಷೆಗಳಲ್ಲಿ ಮಾಡಿದ ಸಾಹಿತ್ಯದಲ್ಲಿರುವ ಅನುವಾದ ಕಲೆಯ ವಿಶಿಷ್ಟತೆಯನ್ನು ಆಮೂರ ಅವರು ವಿಶ್ಲೇಷಿಸಿದ್ದಾರೆ. ಬೇಂದ್ರೆಯವರ ನಾಟ್ಯದೃಷ್ಟಿಯ ವಿಸ್ತಾರವಾದ ವಿಮರ್ಶೆಯೂ ಇವರಲ್ಲಿದೆ, ಬೇಂದ್ರೆ ಕಾವ್ಯದ ಸಮಗ್ರ ಓದಿನ ಚಿಂತನಶೀಲತೆಯನ್ನು ವಿವಿಧ ಮುಖಗಳಿಂದ ಪರಿಭಾವಿಸಿ ಸಾಹಿತ್ಯ ಸಂವಾದ ನಡೆಸುವ ಆಮೂರರ ವಿಮರ್ಶೆ ಕನ್ನಡ ವಿಮರ್ಶೆಯ ಶ್ರೇಷ್ಠ ಮಾದರಿಯಾಗಿದೆ. ಶೈಕ್ಷಣಿಕ ಶಿಸ್ತನ್ನು ಕನ್ನಡ ವಿಮರ್ಶೆಗೆ ಅಳವಡಿಸಿ ಪ್ರತಿಯೊಂದು ವಿಚಾರಕ್ಕೂ ಸೂಕ್ತವಾದ ಆಧಾರಗಳನ್ನೊದಗಿಸುತ್ತ ಸಂಶೋಧನ ಪ್ರಬಂಧವನ್ನಾಗಿ ಸ್ವೀಕರಿಸುವಂತೆ ಮಾಡುವ ವಿಧಾನವನ್ನು ಆಮೂರರು ರೂಪಿಸಿದ್ದಾರೆ, ದೇಂದ್ರ ಕಾವ್ಯದ ಓದು ದೇಶೀಯ ಕಾವ್ಯಮೀಮಾಂಸೆಯ ನೆಲೆಯಲ್ಲಿಯೇ ಸಾಗಬೇಕೆಂಬ ಒಳನೋಟವನ್ನು ಒಳಗಿರುವ ಬೆಳಕು' ಕಟ್ಟಿಕೊಡುತ್ತದೆ.
©2024 Book Brahma Private Limited.