‘ಕವಿಗಳು ಕಂಡ ಬಿ.ಎಂ.ಶ್ರೀ’ ಕೃತಿಯನ್ನು ಲೇಖಕ ಹೊ.ರಾ. ಸತ್ಯನಾರಾಯಣರಾವ್ ಸಂಪಾದಿಸಿದ್ದಾರೆ. ಈ ಕೃತಿಗೆ ಪ್ರೊ. ಡಿ. ಲಿಂಗಯ್ಯ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ.. ‘ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿ ಸಂದರ್ಭದಲ್ಲಿ ಕನ್ನಡ ಕಣ್ವ, ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ಅವರು ನವ ಚೈತನ್ಯ ನೀಡಿದ ಪ್ರಾಂಜಲ ಪ್ರಭಾವಳಿ. ಅವರ ಬದುಕು ಬರಹ ಅನುಪಮ ಆದರ್ಶ. ಅವರ ಬರಹದಲ್ಲಿ ಹೊಸ ಹೊಳಹು ಮೂಡಿತು. ಅವರ ಕನ್ನಡ ನಾಡು, ಕನ್ನಡತನ, ಕನ್ನಡಿಗರ ಚಿಂತನದಲ್ಲಿ ನವೀನ ಸ್ಫೂರ್ತಿ ಚಿಮ್ಮಿತು.
ಆ ಪ್ರಾತಃಸ್ಮರಣೀಯರ ಬಗೆಗೆ ಅವರ ಸಮಕಾಲೀನರು, ಅನಂತರದವರು, ಹಿರಿಯರು, ಕಿರಿಯರು ಕಾವ್ಯನಮನ ಸಲ್ಲಿಸಿ ಶ್ರೀಯವರ ಮೇರುಸದೃಶ ವ್ಯಕ್ತಿತ್ವವನ್ನು ಚಿರಸ್ಥಾಯಿಯಾಗಿಸಿದ್ದಾರೆ. ಅಂಥಹ ಮಹನೀಯರನ್ನು ಕುರಿತು ರಚಿಸಿದ ವಿವಿಧ ಕವಿಗಳ ವಿಶಿಷ್ಟ ಕವನ ಪುಷ್ಪಮಾಲೆ. ಈ ಅಪೂರ್ಣ ಸಂಕಲನ ಕವಿಗಳು ಕಂಡ ಬಿ.ಎಂ.ಶ್ರೀ ’ ಇದು ಕನ್ನಡ ಸಹೃದಯರ ಪ್ರೀತಿ ವಿಶ್ವಾಸವನ್ನು ಗಳಿಸಬಹುದೆಂಬ ಸದುದ್ದೇಶದಿಂದ ಪ್ರಕಟಿಸಲಾಗಿದೆ ಎಂದಿದ್ದಾರೆ.
©2024 Book Brahma Private Limited.