ಶಕುಂತಲೆಯ ಸ್ವಗತ ಸು.ರುದ್ರಮೂರ್ತಿ ಶಾಸ್ತ್ರಿ ಅವರ ಕೃತಿಯಾಗಿದೆ. ದುಷ್ಯಂತ ಬೇಟೆಗೆ ಬಂದವನು ಕಣ್ಣಾಶ್ರಮದಲ್ಲಿ ಶಕುಂತಲೆಯನ್ನು ಕಂಡು ಮೋಹಪರವರನಾಗಿ ಗಾಂಧರ್ವ ವಿವಾಹ ಮಾಡಿಕೊಂಡು ಅವಳೊಂದಿಗೆ ರಮಿಸಿ ಬೇಗ ಕರೆಸಿಕೊಳ್ಳುವುದಾಗಿ ಮಾತುಕೊಟ್ಟು ಹೊರಟುಹೋಗುತ್ತಾನೆ. ನಂತರ ಮರೆತೇಬಿಡುತ್ತಾನೆ. ಇಲ್ಲಿ ದುಷ್ಯಂತ ತಾನೇ ಮರೆಯಲಿಲ್ಲ. ದುರ್ವಾಸರ ಶಾಪದ ಕಾರಣವಾಗಿ ಮರೆತ ಎಂದು ಅವನ ಪರವಾಗಿ ಕಾಳಿದಾಸ, ನೆನಪು ಕೊಡಬೇಕಾದ ಉಂಗುರವೂ ಕಳೆದುಹೋದ ಪ್ರಸಂಗವನ್ನು ತರುತ್ತಾನೆ. ನಾನು ಮಹಾಭಾರತದ ಶಕುಂತಲೆಯ ಕಥೆಯ ಭಿತ್ತಿಯನ್ನು ತೆಗೆದುಕೊಂಡು ವಿಭಿನ್ನ ರೀತಿಯಲ್ಲಿ ಮನರಚನೆ ಮಾಡಲು ಪ್ರಯತ್ನಿಸಿದ್ದೇನೆ. ಮುಖ್ಯವಾಗಿ ಒಬ್ಬ ರಾಜನಿಂದಲೇ ವಂಚನೆಗೊಳಗಾದ ಶಕುಂತಲೆಯ ಮನಸ್ಥಿತಿಯ ಬಗ್ಗೆ, ಮಹರ್ಷಿ ಕಣ್ವರ ವಿಶೇಷ ವ್ಯಕ್ತಿತ್ವದ ಬಗ್ಗೆ, ಅನಸೂಯೆ, 'ಪ್ರಿಯಂವದೆ, ಗೌತಮಿಯ ಪಾತ್ರಪೋಷಣೆಗೆ ಹೆಚ್ಚು ಗಮನ ನೀಡಿದ್ದೇನೆ. ಮಹಾಭಾರತದ ಕಥೆ, ಕಾಳಿದಾಸನ ಪಾತ್ರಗಳು, ಒಂದೆರಡು ಕಥಾರೇಖೆಗಳನ್ನು ತೆಗೆದುಕೊಂಡು ಈ ಕಾದಂಬರಿ ತೀರ ಹೊಸಸೃಷ್ಟಿಯೇ ಆಗಿದೆ ಎಂದು ಸು. ರುದ್ರಮೂರ್ತಿ ಶಾಸ್ತ್ರಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.