ವಾಮನ ಬೇಂದ್ರೆ ಅವರು ಅಂಬಿಕಾತನಯದತ್ತರ ಸಮಗ್ರ ಸಖೀಗೀತ ‘ಔದುಂಬರ ಗಾಥೆ’ ಸಂಪುಟ 8ರ ಸಂಪಾದಕರಾಗಿದ್ದಾರೆ. ಈ ಕೃತಿಯ ದ.ರಾ ಬೇಂಧ್ರೆಯವರ ಜೀವನ ಮಹಾಕಾವ್ಯವಾಗಿದ್ದು, ಪರಿವಿಡಿಯಲ್ಲಿ ಪೂರ್ವ ಸಖೀಗೀತ, ಸಖೀಗೀತ, ಸಂತತಿ ಗೀತ, ಮೊಮ್ಮಕ್ಳ ಚಿಂತನ, ಅರ್ಪಣ, ಉತ್ತರ ಸಖೀಗೀತ, ಮರಣೋತ್ತರ ಸಖೀಗೀತ, ‘ಸಖೀಗೀತ’ದ ಇತರ ಕವನಗಳು ಎಂಬ ಪ್ರಮುಖ ಭಾಗಗಳಿವೆ. ಪ್ರತಿ ಭಾಗದಲ್ಲೂ ಬಿಡಿ ಕವನಗಳ ಸಂಗ್ರಹಗಳಿವೆ. ಅವುಗಳಲ್ಲಿ ಪ್ರಮುಖವಾದವು ಬಿಸಿಲುಗುದುರೆ, ನನ್ನ ಕೈಯ ಹಿಡಿದಾಕೆ!, ನಾನೊಂದು ನೆನೆದರೆ, ನಾನು ಬಡವಿ, ದೀಪ, ಮನದನ್ನೆ, ಸಂಸಾರ, ಸಸಾರ ಅಲ್ಲವೋ ಸಂಸಾರ, ಫಜಾರಗಟ್ಟೀ ಮುಟ್ಟೋಣು ಬಾ, ಗೃಹಿಣಿ, ಜೀವದ ಗೆಳತಿ, ಬರುವದೇನೆ ನೆಪ್ಪಿಗೆ..
©2024 Book Brahma Private Limited.