ಸತೀಶ್ ಸಮಗ್ರ ಕವಿತೆಗಳು-ಈ ಕೃತಿಯು ಕವಿ ಸತೀಶ್ ಕುಲಕರ್ಣಿ ಅವರ ಕವಿತೆಗಳ ಸಮಗ್ರ ಸಂಕಲನವಾಗಿದೆ. 2012ರಲ್ಲಿ ಈ ಕೃತಿಯನ್ನು ಬಳ್ಳಾರಿಯ ಲೋಹಿಯಾ ಪ್ರಕಾಶನ ಪ್ರಕಟಿಸಿತ್ತು. ಈ ಕವಿಯ ಸಮಗ್ರ ಕವಿತೆಗಳ ಒಟ್ಟು ಆಶಯ-ಮಾನವೀಯತೆ. ಸಮಾನತೆಯ ಸಾಮಾಜಿಕ ಮೌಲ್ಯಭರಿತ ಪರಿಸರ ನಿರ್ಮಾಣವಾಗಬೇಕೆಂಬ ಆಶಯ ಒಳಗೊಂಡಿದೆ. ಶೋಷಕರ, ಬಂಡವಾಳಿಗರ, ಸಾಮ್ರಾಜ್ಯಶಾಹಿ ವಿರೋಧಿ ಧೋರಣೆಯು ಕವಿತೆಗಳ ಆಕ್ರೋಶವಾಗಿದೆ. ಪ್ರೀತಿ-ಪ್ರೇಮದ ಜೊತೆ ನಿಸರ್ಗ ಸಂರಕ್ಷಿಸುವ ತುಡಿತವೂ ಇದೆ. ಬಂಡಾಯವೆಂದರೆ ಮಾನವೀಯತೆಯ ಆಶಯವೇ ಆಗಿದೆ ಎಂಬ ಧ್ವನಿಯೂ ಕವಿತೆಗಳ ಜೀವಾಳವಾಗಿರುವುದನ್ನು ಕಾಣಬಹುದು.
©2024 Book Brahma Private Limited.