ಬುಗುರಿ ವಿಜಯ ಪದ್ಮಶಾಲಿ ಕವನಸಂಕಲನವಾಗಿದೆ. ಈ ಕವನ ಸಂಕಲನವು ಓದುಗದೊರೆಗಳನ್ನು ಹತ್ತು ಹಲವು ಆಯಾಮಗಳಲ್ಲಿ ಆವರಿಸಿ ಬಿಡುತ್ತದೆ. ಕಾವ್ಯ ಕಲ್ಪವಲ್ಲಿಯವರು ಸಾಹಿತ್ಯದ ಯಾವುದೇ ಒಂದು ಪ್ರಕಾರಗಳಿಗೆ ಅಪ್ಪಿಕೊಳ್ಳದೆ ಕಥೆ, ಕಾದಂಬರಿ, ಮುಕ್ತಕಕಾವ್ಯ, ಕವನ ಹೀಗೆ ಅನೇಕ ವಿಭಾಗಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದರಲ್ಲಿ ಸಾಫಲ್ಯತೆಯನ್ನು ಸಾಧಿಸಿದ್ದಾರೆ ಎನ್ನಬಹುದು. ಪ್ರಸ್ತುತ 'ಬುಗುರಿ' ಕವನ ಸಂಕಲನದಲ್ಲಿ ಕೂಡ ಅವರು ಬದುಕಿನ ವಿವಿಧ ಮಜಲುಗಳನ್ನು ಅವರ ಪ್ರಬುದ್ಧತೆಯನ್ನು ಗಮನಿಸಿದಾಗ ಅವರಿಂದ ವಿಭಿನ್ನ ಅಷ್ಟೇ ಸೂಕ್ಷ್ಮ ದೃಷ್ಟಿಕೋನಗಳಿಂದ ಪರಾಕಾಯ ಪ್ರವೇಶ ಪಡೆದು ತಮ್ಮ ಕಾವ್ಯದ ಮೂಲಕ ಅನೇಕ ವಿಚಾರಗಳನ್ನು ಅನಾವರಣಗೊಳಿಸುವುದರಲ್ಲಿ ಯಶಸ್ಸು ಸಾಧಿಸಿದ್ದಾರೆ ಭದ್ರಾವತಿ ರಾಮಾಚಾರಿ ಅವರುಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.