ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರ ಸಮಗ್ರ ಕವಿತೆಗಳನ್ನು ಆರು ಸಂಪುಟಗಳಲ್ಲಿ ಸಂಗ್ರಹಿಸಲಾಗಿದೆ. ಈ ಸಂಪುಟಗಳನ್ನು ನಮನ ಸಂಪುಟ, ದರ್ಶನ ಸಂಪುಟ, ವಿಕಾಸ ಸಂಪುಟ, ವಿನ್ಯಾಸ ಸಂಪುಟ, ತತ್ವ ಸಂಪುಟ, ಸಿದ್ಧಾಂತ ಸಂಪುಟ ಎಂದು ಕರೆಯಲಾಗಿದೆ. ಬೇಂದ್ರೆಯವರ ಬಹುತೇಕ ಎಲ್ಲ ಕವಿತೆಗಳೂ ಈ ಸಂಪುಟದಲ್ಲಿ ನೋಡಲು ಸಿಗುತ್ತವೆ. ಬೇಂದ್ರೆಯವರ ತಮ್ಮ ಜೀವಿತದ ಅವಧಿಯಲ್ಲಿ 25 ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಅವರು ಕಾಲವಾದ ನಂತರ ಆರು ಸಂಕಲನಗಳು ಪ್ರಕಟಗೊಂಡವು. ಅವುಗಳನ್ನು ವಿಷಯವಾರು ವಿಂಗಡಿಸಲಾಗಿದೆ. ಸಂಕಲನವಾರು ಕವಿತೆಗಳನ್ನು ಓದಿದವರಿಗೆ ಕವಿತೆಗಳನ್ನು ಹುಡುಕುವುದು ಕಷ್ಟವಾದರೂ ಎಲ್ಲ ಕವಿತೆಗಳು ಒಂದೆ ಕಡೆಗೆ ಸಿಗುತ್ತವೆ ಎಂಬುದು ವಿಶೇಷ.
©2025 Book Brahma Private Limited.