ನವ್ಯ ಹಾಗೂ ನವೋದಯ ಎರಡನ್ನೂ ಮೈಗೂಡಿಸಿಕೊಂಡು ಕವಿತೆಗಳನ್ನು ರಚಿಸಿದ ಖ್ಯಾತಿಯ ಎಂ. ಗೋಪಾಲಕೃಷ್ಣ ಅಡಿಗ ಅವರ ಎಲ್ಲ ಕವಿತೆಗಳ ಸಂಗ್ರಹ, ಸಮಗ್ರ ಕಾವ್ಯ. ಮೂಲತಃ ಆಡಿಗರು, ಕಾವ್ಯದಲ್ಲಿ ಹೊಸದೊಂದನ್ನು ಸೃಷ್ಟಿಸಬೇಕು ಎಂಬ ಹಂಬಲದವರು. ಹಾಗೆಯೇ ಅವರು, ತಮ್ಮ ಮೊದಲಿನ ಕವಿತೆಗಳಿಂದ ಹಿಡಿದು ಹೊಸದಕ್ಕೆ ಹಂಬಲಿಸಿದ ಕುರುಹುಗಳನ್ನು ತದನಂತರ ಬಂದ ಎಲ್ಲ ಕವಿತೆಗಳಲ್ಲೂ ಕಾಣಬಹುದು. ವ್ಯಕ್ತಿಯ ವೈಚಾರಿಕ ಛಾಪನ್ನು ಕಾವ್ಯಗಳಲ್ಲಿ ಪಡಿಮೂಡಿಸಿದ್ದು, ಓದುಗರ ವೈಚಾರಿಕತೆಗೂ ಪ್ರೇರಣೆಯಾಗಿ ಇವರ ಕಾವ್ಯ ಸಾಹಿತ್ಯವಿದೆ. ಕವಿತೆಗಳಲ್ಲಿ ಭಾವವಿಲ್ಲ ಎಂತಲ್ಲ. ಭಾವವು ಸುಪ್ತವಾಗಿದ್ದು, ವೈಚಾರಿಕತೆ ಪ್ರಖರವಾಗಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ.
ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆಮದ್ದಳೆ, ಭೂಮಿಗೀತ, ವರ್ಧಮಾನ, ಇದನ್ನು ಬಯಸಿರಲಿಲ್ಲ, ಮೂಲಕ ಮಹಾಶಯರು, ಬತ್ತಲಾರದ ಗಂಗೆ, ಮಾವೋ ಕವನಗಳು, ಚಿಂತಾಮಣಿಯಲ್ಲಿ ಕಂಡ ಮುಖ, ಸುವರ್ಣ ಪುತ್ಥಳಿ, ಬಾ ಇತ್ತ ಇತ್ತ ಹೀಗೆ ವಿವಿಧ ಕವನ ಸಂಕಲನಗಳ ಕವಿತೆಗಳನ್ನು ಸಂಕಲಿಸಲಾಗಿದೆ.
©2025 Book Brahma Private Limited.