ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಸಮಗ್ರ ಕವಿತೆಗಳನ್ನು ಸಂಕಲಿಸಿದ ಕೃತಿ-ಸಮಗ್ರ ಕಾವ್ಯ. ಚಂದ್ರಶೇಖರ ಕಂಬಾರರು ಮೂಲತಃ ನಾಟಕಕಾರರು. ಆದರೆ, ಕಥೆ, ಕಾದಂಬರಿ ಹಾಗೂ ಕವಿತೆಗಳನ್ನು ಸಹ ರಚಿಸಿದ್ದಾರೆ. ಚಲನಚಿತ್ರಗಳಿಗೆ ಗೀತೆಗಳನ್ನು ಬರೆದಿದ್ದಾರೆ. ರಂಗಗೀತೆಗಳೂ ಸಹ ಇವರ ಬಹುಮುಖ ವ್ಯಕ್ತಿತ್ವದ ಪ್ರತೀಕವಾಗಿವೆ. ಈ ಎಲ್ಲ ಪ್ರಕಾರ ಸಾಹಿತ್ಯದ ವಸ್ತು ಎಂಬಂತೆ ಇವರ ಕವಿತೆಗಳಿದ್ದು, ವಸ್ತು ವೈವಿಧ್ಯತೆಯನ್ನು ಒಳಗೊಂಡಿವೆ. ‘ಮುಗುಳು'(1958), ‘ಹೇಳತೇನ ಕೇಳ'(1964), ‘ತಕರಾರಿನವರು'(1971), ಸಾವಿರದ ನೆರಳು-1979, ಆಯ್ದ ಕವನಗಳು-1989, ಬೆಳ್ಳಿ ಮೀನು-1989, ಅಕ್ಕಕ್ಕು ಹಾಡುಗಳೆ-1993, ಈವರೆಗಿನ ಹೇಳತೇನ ಕೇಳ-1993 ಹೀಗೆ ಕಾಲಕಾಲಕ್ಕೆ ಅವರು ಬರೆದ ಎಲ್ಲ 8 ಕವನ ಸಂಕಲನಗಳ ಒಟ್ಟು ಮೊತ್ತವಾಗಿ ‘ಸಮಗ್ರ ಕಾವ್ಯ’ ಒಡಮೂಡಿದೆ. ‘ಚಕೋರಿ’ ಎಂಬುದು ಅವರು ಬರೆದ ಮಹಾಕಾವ್ಯವಾಗಿದೆ.
©2024 Book Brahma Private Limited.