ಕರ್ಣಚೈತ್ರನ ಪರ್ಣಶಾಲೆ ಜಿ. ಕೃಷ್ಣಪ್ಪ ಅವರ ಕೃತಿಯಾಗಿದೆ. `ಕರ್ಣಚೈತ್ರನ ಪರ್ಣಶಾಲೆ’ ಎನ್ನುವ ಹೆಸರಿನಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ವಿಮರ್ಶೆಯನ್ನು 35 ಅಧ್ಯಾಯಗಳನ್ನು ಒಳಗೊಂಡ ಕೃತಿರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಪೂರ್ವ-ಪಶ್ಚಿಮದ ಮಹಾಕಾವ್ಯಗಳನ್ನೂ ಕಾವ್ಯಮೀಮಾಂಸೆಯನ್ನೂ ಕಾವ್ಯವಿಮರ್ಶೆಯನ್ನೂ ಶ್ರದ್ಧಾಸಕ್ತಿಯಿಂದ ಅಧ್ಯಯನ ಮಾಡಿ, ಚಿಂತನ-ಮAಥನ ಮಾಡಿ ಅರಗಿಸಿಕೊಂಡು ಪರಿಪುಷ್ಟವಾದ ಕುವೆಂಪು ಅವರ ದೈತ್ಯಪ್ರತಿಭೆಯಿಂದ ಹೊಮ್ಮಿದ ದರ್ಶನಮಹಾಕಾವ್ಯವನ್ನು ವಿಮರ್ಶೆಗೆ ಒಳಪಡಿಸಬೇಕಾದರೆ ಕವಿಪ್ರತಿಭೆಯ ಸ್ವರೂಪವನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳುವ ಮಟ್ಟಿಗಿನ ಓದು ಗ್ರಹಿಕೆ ಚಿಂತನೆಗಳು ಬೇಕಾಗುತ್ತವೆ. ಮಹಾಕಾವ್ಯ ಸೃಜನೆ ಕುವೆಂಪು ಅವರಿಗೆ ತಪಸ್ಸಾದಂತೆ, ಆ ಕಾವ್ಯದ ವಿಮರ್ಶೆಯೂ ಒಂದು ತಪಸ್ಸಾಗಬೇಕಾಗುತ್ತದೆ. ಅದು ಹೇಗೆ ಇರಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ `ವಿಮರ್ಶೆಯ ಪೂರ್ವ ಪಶ್ಚಿಮ’ದಲ್ಲಿ ಜಿ.ಎಸ್.ಶಿವರುದ್ರಪ್ಪನವರು ಆಡಿರುವ ಈ ಮಾತುಗಳನ್ನು ಗಮನಿಸುವುದು, ಮನನ ಮಾಡಿಕೊಳ್ಳುವುದು ವಿಮರ್ಶಕರೆನಿಸಿಕೊಳ್ಳುವವರಿಗೆ, ವಿಮರ್ಶಿಸುವ ಉತ್ಸಾಹದಲ್ಲಿ ಇರುವವರಿಗೆ ಬಹಳ ಮುಖ್ಯ ಎಂದು ನನಗನ್ನಿಸುತ್ತದೆ ಎಂದು ಪುಸ್ತಕದ ಲೇಖಕರು ತಿಳಿಸಿದ್ದಾರೆ.
©2024 Book Brahma Private Limited.