ಪ್ರೇತಕಾಂಡ ಸಮಗ್ರ ಸಂಕಲನವು ಲೇಖಕ ಆನಂದ ಝಂಜರವಾಡ ಈವರೆಗಿನ ಕವಿತೆಗಳನ್ನೊಳಗೊಂಡ ಪುಸ್ತಕ. ಕೃತಿಯ ಬೆನ್ನುಡಿಯಲ್ಲಿ ಇಲ್ಲಿನ ಅನೇಕ ಕವಿತಗಳಿಂದ ಸ್ಪಷ್ಟವಾಗುವ ಹಾಗೆ ಬೇಂದ್ರೆಯವರ ಹಾಗೇ ಬರೆಯುವುದಾಗಲೀ ಅಡಿಗರ ಹಾಗೇ ಬರೆಯುವುದಾಗಲೀ ಇವರಿಗೆ ಸಾಧ್ಯವಿತ್ತು.ಅಂತಹ ಆಕರ್ಷಣೆಯನ್ನು ಮೀರುವುದು ಕಷ್ಟ. ಆದರೆ ಹೊರಗಿನಿಂದ ಮೂಲಮಾದರಿಗಳನ್ನು ಸ್ವೀಕರಿಸುವ ಅಪಾಯವನ್ನು ತಿಳಿದಿರುವ ಈ ಕವಿ ತಮ್ಮ ಖನನೋದ್ಯಮವನ್ನು ಮುಂದುವರಿಸಿದ್ದಾರೆ. ಸತ್ಯವನ್ನು ಶಬ್ದಗಳಲ್ಲಿ ಹಿಡಿಯಲಾಗುವುದಿಲ್ಲ. ಶಬ್ದಗಳಲ್ಲಿ ಹಿಡಿದಿದ್ದು ಸತ್ಯವಲ್ಲ ಎಂಬ ವಿವೇಕವು ಅವರ ಕವಿತೆಗೆ ಆತ್ಮವಿಮರ್ಶೆಯ ತಲ್ಲನದ ಆಯಾಮಗಳನ್ನು ಕೊಟ್ಟಿದೆ. ಆದರೆ ಇದುಮಿಥ್ಥಂ ಎಂದು ಹೇಳದ ಹಾಗೆ ತೋರುವ ರಚನಾವಿನ್ಯಾಸಗಳ ಹಿಂದೆಯೂ ಗಟ್ಟಿಯಾದ ಜೀವನದರ್ಶನ ಮತ್ತು ವೈಚಾರಿಕತೆಗಳು ಉಪಸ್ಥಿತವಾಗಿವೆ. ಆದ್ದರಿಂದಲೇ ಈ ಕವಿತೆಗಳಲ್ಲಿ ಮಡುಗಟ್ಟಿರುವ ವಿಷಾದವಾಗಲೀ ಆತ್ಮವಿಮರ್ಶೆಯ ಛಾಯವಾಗಲೀ ಹೇಡಿತನದಿಂದ ಬಂದವಲ್ಲ. ತಾನು ಏನು ಹೇಳುತ್ತಿದ್ದೇನೆ ಎಂದು ತಿಳದವನ ಮಾತುಗಳು ಇಲ್ಲಿವೆ. ಕೈ ಎತ್ತಿ ಒದರಿ ಹೇಳ್ತೀನಿ, ಯಾರೂ ನನ್ನ ಮಾತು ಕೇಳವಲ್ರು. ಯಾವ ವ್ಯಾಸನೂ ಪಾತ್ರವನ್ನ ಪೂರ್ತಿ ಅಪ್ಪಿಲ್ಲ ಎಂದು ಹೇಳುವುದು ಅಂಥ ಆತ್ಮವಿಶ್ವಾಸದ ಕುರುಹು ಎಂದು ಡಾ. ಎಚ್.ಎಸ್. ರಾಮಚಂದ್ರರಾವ್ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.