ವೀರಣ್ಣ ರಾಜೂರ
(04 June 1947)
ಸಂಶೋಧಕ, ಸಾಹಿತಿ ವೀರಣ್ಣ ರಾಜೂರ ಅವರು ಜನಿಸಿದ್ದು 1946 ಜೂನ್ 4ರಂದು, ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ ಸೇವೆ ಆರಂಭಿಸಿದರು. ಇವರ ಪ್ರಮುಖ ಕೃತಿಗಳೆಂದರೆ ವಚನ ಅಧ್ಯಯನ, ಸ್ವರವಚನಗಳು, ವಿಚಾರ ಪತ್ನಿಯರು (ಸಂಶೋಧನಾ ಕೃತಿ), ಅವಳೇ ಗಂಡ, ನಾನೆ ಹೆಂಣ್ತಿ, ಲವ್ ಅಂದ್ರೆ ಪ್ರೇಮ (ನಾಟಕಗಳು), ಹಾಲಭಾವಿ ವೀರಭದ್ರಪ್ಪನವರು, ಪಿ.ಬಿ. ಧುತ್ತರಗಿ-ಜೀವನಚರಿತ್ರೆ. ಸಿದ್ಧಲಿಂಗ ಶತಕ, ವಚನಾಮೃತಸಾರ, ವಚನಶಾಸ್ತ್ರ ಸಾರ, ಶಿವಯೋಗ ಪ್ರದೀಪಿಕೆ, ಭಕ್ತ್ಯಾನಂದ ಸುಧಾರ್ಣವ (ಸಂಪಾದಿತ ...
READ MORE