ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಮಗ್ರ ಕಾವ್ಯ ಸಂಪುಟದ ಮೊದಲ ಸಂಪುಟ ಇದು. ಈ ಮೊದಲ ಸಂಪುಟದಲ್ಲಿ ಪರಿವೃತ್ತ, ಬಾಗಿಲು ಬಡಿವ ಜನ, ಮೊಖ್ತಾ, ಸಿಂದಾಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಮರದ ಗಿಳಿಗಳು, ಗೀತೆಗಳು ಸಂಕಲನಗಳಲ್ಲಿನ ಅವರ ಕವಿತೆಗಳು ಸೇರಿವೆ. ಈ ಸಂಪುಟದ ಬೆನ್ನುಡಿಯಲ್ಲಿ ಜಿ.ಎಸ್.ಶಿವರುದ್ರಪ್ಪನವರು ಬರೆದ ಮಾತುಗಳು ಹೀಗಿವೆ: “ಈವರೆಗಿನ ಹಲವು ಸಾಹಿತ್ಯ ಚಳವಳಿಗಳಿಂದ ಕಲಿತ ಪಾಠಗಳೂ,ಕವಿತೆಯ ನಿರ್ಮಿತಿ ಗಂಭೀರವಾದೊಂದು ಕಲೆಗಾರಿಕೆ ಎಂಬ ಎಚ್ಚರವೂ, ಎಲ್ಲಿಯೂ ಸ್ಥಗಿತಗೊಳ್ಳದೆ ಹೊಸ ಜಿಗಿತಗಳ ಮೂಲಕ ಮುನ್ನಡೆಯುವ ಉತ್ಸಾಹವೂ, ಬದುಕಿನ ವಾಸ್ತವಗಳನ್ನೂ ವಿಸ್ಮಯಗಳನ್ನೂ ನಿಗೂಢಗಳನ್ನೂ ಗ್ರಹಿಸಿ ನಿರೂಪಿಸುವ ಮತ್ತು ವ್ಯಾಖ್ಯಾನಿಸುವ ಕೌಶಲವೂ, ದೊಡ್ಡದೊಂದನ್ನು ಹಿಡಿದು ಕಡೆದು ನಿಲ್ಲಿಸಬೇಕೆಂಬ ಮಹತ್ವಾಖಾಂಕ್ಷೆಯೂ, ಎಲ್ಲದಕ್ಕಿಂತ ಮಿಗಿಲಾಗಿ ಕವಿತೆಯ ಬಗ್ಗೆ ಅವರಿಗಿರುವ ಅದಮ್ಯವಾದ ಪ್ರೀತಿಯೂ ವೆಂಕಟೇಶಮೂರ್ತಿ ಅವರ ಬರಹದ ಹಿಂದಿನ ಮೂಲ ಪ್ರೇರಣೆಗಳಾಗಿವೆ.”
©2024 Book Brahma Private Limited.