ಕನ್ನಡ ಬರಹದ ಸೊಲ್ಲರಿಮೆ ಪುಸ್ತಕವು ಒಳಸೊಲ್ಲುಗಳ ಬಳಕೆ ಮತ್ತು ಸೊಲ್ಲುಗಳ ಜೋಡಣೆಗಳ ಬಗ್ಗೆ ವಿವರಿಸುತ್ತದೆ. ಈ ಕೃತಿಯಲ್ಲಿ ಎರಡು ಭಾಗಗಳಿವೆ. ಮೊದಲನೇ ಭಾಗದಲ್ಲಿ ಪಸುಗೆಯಲ್ಲಿ ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನ ಪಾಂಗನ್ನಾಗಿ, ಎಸಕಪರಿಚೆಯನ್ನಾಗಿ, ಇಲ್ಲವೇ ಅದರಲ್ಲಿ ಬರುವ ಪದದ ಪರಿಚೆನುಡಿತವನ್ನಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ. ಸೊಲ್ಲಿನಲ್ಲಿ ಕೆಲವು ಮಾರ‍್ಪಾಡುಗಳನ್ನು ಮಾಡಿ ಅದನ್ನು ಈ ರೀತಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಬಹುದು, ಇಲ್ಲವೇ ಅದರಲ್ಲಿ ಯಾವ ಮಾರ‍್ಪಾಡನ್ನೂ ಮಾಡದೆ ಹಾಗೆಯೇ ಎತ್ತುಪದಗಳೊಂದಿಗೆ ಸೇರಿಸಿಯೂ ಇಂತಹ ಕೆಲಸಗಳಲ್ಲಿ ತೊಡಗಿಸಬಹುದು. ಇದನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಈ ಹದಿಮೂರನೇ ಪಸುಗೆಯಲ್ಲಿ ತಿಳಿಸಲಾಗಿದೆ.
©2024 Book Brahma Private Limited.