ಚಂದ್ರಮೌಳಿ ಎಸ್. ನಾಯ್ಕರ ಅವರ ‘ಸರಳ ಸಂಸ್ಕೃತ ವ್ಯಾಕರಣ’ ಕೃತಿಯು ವ್ಯಾಕರಣ ಕುರಿತ ವಿಚಾರಗಳನ್ನು ಒಳಗೊಂಡಿದೆ. ಸಂಸ್ಕೃತ ವರ್ಣಮಾಲೆ, ಸಂಧಿ ನಿಯಮಗಳು, ಶಬ್ಧರೂಪವಾಲಿ, ಅನಿಯತ ಶಬ್ಧಗಳು, ಸರ್ವನಾಮ ಶಬ್ಧಗಳು ಸಂಖ್ಯಾವಾಚೀ ಶಬ್ಧಗಳು, ಅವ್ಯಯಗಳು, ಸಮಾಸಗಳು, ಆಧಿಕ್ಯ ಭೋಧನ ವಿಶೇಷಗಳು, ಸ್ತ್ರೀವಾಚಕ ಪ್ರತ್ಯಯಗಳು, ತದ್ಧಿತ ಪ್ರತ್ಯಯಗಳು, ಕ್ರಿಯಾಪದಗಳು, ಪ್ರಯೋಗಗಳು, ಕೃಂದತಗಳು, ಕಾರಕಗಳು, ವಾಕ್ಯ ವಿಜ್ಞಾನ ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದೆ. ಭಾರತೀಯ ಭಾಷೆಗಳಲ್ಲಿಯೇ ಸಂಸ್ಕೃತ ಭಾಷೆಯೂ ಇತರ ಭಾಷೆಗಳಿಗಿಂತ ಅತೀ ಪ್ರಾಚೀನ ಮತ್ತು ಶ್ರೇಷ್ಠ ಭಾಷೆಯೆಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಎಲ್ಲ, ಭಾಷೆಗಳಲ್ಲಿಯೂ ವರ್ಣ, ಸಂಧಿ, ಸಮಾಸ, ಕಾರಕ ಮೊದಲಾದವುಗಳು ಸಂಸ್ಕೃತ ಭಾಷೆಯಂತೆಯೇ ದೊರೆಯುತ್ತವೆ. ಸಂಸ್ಕೃತ ಭಾಷೆಯನ್ನು ತಿಳಿಯಬೇಕಾದರೆ ಪಾಣಿನಿಯ ವ್ಯಾಕರಣ ಶಾಸ್ತ್ರವನ್ನು ಓದಬೇಕು ಎನ್ನುತ್ತಾರೆ ಇಲ್ಲಿ ಲೇಖಕ. ವರ್ಣಗಳ ಉಚ್ಛಾರದ ಬಗೆಗಿನ ಸೂತ್ರಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ.
©2024 Book Brahma Private Limited.