‘ಕನ್ನಡ ವ್ಯಾಕರಣ ಮತ್ತು ಭಾಷೆ’ ಡಾ. ವಿ. ಜಿ. ಪೂಜಾರ ಅವರ ಕೃತಿ. ಇಲ್ಲಿ ಕನ್ನಡ ಭಾಷೆ ಮತ್ತು ವ್ಯಾಕರಣದ ಪಠ್ಯವನ್ನು ಒಟ್ಟಾಗಿ ಅರ್ಥೈಸಲಾಗಿದೆ. ಭಾಷಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರಚಿತವಾಗಿರುವ ಈ ಕೃತಿ ಹೊಸ ಬಗೆಯ ಭಾಷಾ ಬಳಕೆಯ ಸಾಧ್ಯತೆಗಳ ಬಗ್ಗೆ ವಿವರಿಸುತ್ತದೆ.
ಪುಸ್ತಕ ಪರಿಚಯ: ಕೃಪೆ: ಹೊಸತು
ಈ ಕೃತಿಯಲ್ಲಿ ಕನ್ನಡ ವ್ಯಾಕರಣ ಮತ್ತು ಕನ್ನಡ ಭಾಷೆಯ ವಿಚಾರವನ್ನು ಮೊದಲಿಗೆ ಒಟ್ಟಿಗೆ ನೀಡಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸುಲಭದಲ್ಲಿ, ಸರಳವಾಗಿ ತಿಳಿಯುವಂತೆ ಸಂಕ್ಷಿಪ್ತವಾಗಿ ವ್ಯಾಕರಣ ಮತ್ತು ಭಾಷಾ ವಿಜ್ಞಾನದಂತಹ ಶಾಸ್ತ್ರಗಳನ್ನು ವಿವರಿಸಲಾಗಿದೆ. 'ವ್ಯಾಕರಣದ ಉದ್ದೇಶವು ಒಂದು ಭಾಷೆಯ ಸಾಧು-ಅಸಾಧು, ದುಷ್ಟ-ಶಿಷ್ಟ ಪ್ರಯೋಗಗಳನ್ನು ನಿರ್ಣಯಿಸಿ, ನಿಯಮಿಸುವುದಾಗಿದೆ' ಎಂಬುದರ ಬದಲಾಗಿ, ನಿಯಮಿಸಿದ್ದನ್ನು ಮುರಿಯುತ್ತಲೇ ಹೊಸ ಬಗೆಯ ಪದರಚನೆ, ವಾಕ್ಯರಚನೆಯ ಪ್ರಯೋಗಗಳು ಮೂಡುತ್ತಿವೆ. ಭಾಷೆ ಮತ್ತು ವ್ಯಾಕರಣ ಕುರಿತ ಸಮರ್ಥವಾದ ವಿಚಾರಗಳನ್ನು ಆಸಕ್ತರೆಲ್ಲರಿಗೂ ತಿಳಿಯುವಂತೆ ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.