ಪಂಪಪ್ರಶಸ್ತಿ ಪುರಸ್ಕೃತ ಕೃತಿ-ಕನ್ನಡ ಮಧ್ಯಮ ವ್ಯಾಕರಣ. ಹಿರಿಯ ಲೇಖಕ -ಚಿಂತಕ ತೀ.ನಂ. ಶ್ರೀಕಂಠಯ್ಯ ಅವರು ಬರೆದಿದ್ದಾರೆ. ಕನ್ನಡ ವ್ಯಾಕರಣ ವಲಯದಲ್ಲಿ ಅತ್ಯುತ್ತಮ ಕೃತಿ ಎಂಬ ಹೆಗ್ಗಳಿಕೆ ಇದೆ. ತೀರಾ ಸರಳ ಭಾಷೆಯಲ್ಲಿ ವ್ಯಾಕರಣದ ಸೂತ್ರಗಳನ್ನು ಹೇಳಲಾಗಿದೆ.
ಈ ಗ್ರಂಥವು ಮೊದಲ ಬಾರಿ ಬೆಂಗಳೂರಿನ ಮೋದಿ ಪವರ್ ಪ್ರೆಸ್ ಪ್ರಕಾಶನದವರು 1949ರಲ್ಲಿ ಪ್ರಕಟಿಸಿದರು. ಮೈಸೂರು ರಾಜ್ಯ ಸರ್ಕಾರವು ಈ ಕೃತಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯವಾಗಿಸಿತ್ತು. ‘ವ್ಯಾಕರಣ ಗ್ರಂಥವು ಕೇವಲ ಸೂತ್ರಗಳ ಪಟ್ಟಿಯಾಗಬಾರದು. ಸೂತ್ರಕ್ಕಿಂತ ಹೆಚ್ಚಾಗಿ ವಿವರಣೆಯೂ ಹಾಘೂ ವಿವರಣೆಗಿಂತ ಹೆಚ್ಚಾಗಿ ಉದಾಹರಣೆಗಳೂ ಇರಬೇಕು. ಇದರಿಂದ, ವ್ಯಾಕರಣ ಗ್ರಹಿಕೆ ಕುರಿತಂತೆ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚುತ್ತದೆ. ಇದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಗ್ರಂಥ ರಚಿಸಲಾಗಿದೆ’ ಎಂದು ಲೇಖಕರು ಹೇಳಿದ್ದಾರೆ.
ವಾಕ್ಯ, ಪದ, ವರ್ಣ, ಪ್ರಕೃತಿ, ಪ್ರತ್ಯಯ, ನಾಮಪದ, ಕ್ರಿಯಾಪದ, ಸಂಧಿ, ಲಿಂಗವಚನಗಳು, ಭಾವನಾಮ, ಸಮಾಸ ಇವೇ ಮುಂತಾದ ವ್ಯಾಕರಣದ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ತಿಳಿಯುವಂತೆ ವಿವರಿಸಲಾಗಿದೆ.
©2024 Book Brahma Private Limited.