ಇಂಗ್ಲಿಷ್ ಮೀಡಿಯಂ ಶಾಲೆಗಳು ಸಾಲು ಸಾಲಾಗಿ ತೆರೆಯುತ್ತಿರುವುದರ ಪರಿಣಾಮವಾಗಿ ಹುಡುಗರಿಗೆ ಕನ್ನಡ ಪಠ್ಯ ಕಠಿಣ ಎಂದು ಹೇಳುವಂತಾಗಿದೆ. ತಂದೆ - ತಾಯಂದಿರೂ ಇತ್ತೀಚಿನ ದಿನಗಳಲ್ಲಿ ತಮ್ಮ ಮಗನಿಗೆ ಕನ್ನಡ ತುಂಬಾ ಕಷ್ಟ ಎಂದು ಹೇಳಲು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ. ಕನ್ನಡ ಸಣ್ಣದಾಗಿ ಓದುವುದಕ್ಕೆ ಮತ್ತು ಮಾತನಾಡುವುದಕ್ಕೆ ಬಂದರೆ ಅದೇ ದೊಡ್ಡ ವಿಷಯ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ವ್ಯಾಕರಣ ಸಹಿತ ಅಧ್ಯಯನ ಮಾಡುವುದಕ್ಕೆ ಸಂಧಿ - ಸಮಾಸಗಳನ್ನು ಸುಲಭವಾಗಿ, ಸರಳವಾಗಿ ತಿಳಿದುಕೊಳ್ಳುವ ಒಂದು ಕೈಪಿಡಿ ‘ಸಂಧಿ ಸಮಾಸ’.
©2024 Book Brahma Private Limited.