ಕನ್ನಡ ಕಲಿ

Author : ಲಿಂಗದೇವರು ಹಳೆಮನೆ

Pages 194

₹ 180.00




Year of Publication: 2016
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಜಿಲ್ಲೆ: ಬಳ್ಳಾರಿ

Synopsys

ಖ್ಯಾತ ಸಾಹಿತಿ ಪ್ರೊ. ಲಿಂಗದೇವರು ಹಳೆಮನೆ ಅವರ ಕೃತಿ-ಕನ್ನಡ ಕಲಿ. ಡಿಪ್ಲೊಮಾ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಪದವಿ ತರಗತಿಯ ಕನ್ನಡೇತರರಿಗೆ ಪಠ್ಯವಾಗಿಸಿದ ಕೃತಿ ಇದು. ತೀರಾ ಸರಳವಾಗಿ ಕನ್ನಡ ಭಾಷಿಕರು ಮಾತ್ರವಲ್ಲ; ಇತರೆ ಭಾಷೀಯ ಜನರಿಗೂ ಕನ್ನಡ ಕಲಿಯುವಂತೆ ಅನುಕೂಲವಾಗುವ ರೀತಿಯಲ್ಲಿ ಎಚ್ಚರವಹಿಸಲಾಗಿದೆ.

About the Author

ಲಿಂಗದೇವರು ಹಳೆಮನೆ
(06 March 1949 - 08 June 2011)

ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಲಿಂಗದೇವರು ಹಳೆಮನೆ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಲುಗೊಣದವರು. 1949ರ ಮಾರ್ಚ್‌ 6ರಂದು ಜನಿಸಿದ ಅವರು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಮೈಸೂರು ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕರಾಗಿದ್ದ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಹಾಮಾನಾ ಪ್ರಶಸ್ತಿ, ಕೆ.ವಿ. ಸುಬ್ಬಣ್ಣ ನಾಟಕ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. ಚಿಕ್ಕದೇವಭೂಪ, ಹೈದರ್, ಅಂತೆಂಬರ ಗಂಡ, ತಸ್ಕರ, ಶಾಪ, ಡಾ.ಬೇಥೂನ್‌, ಮಟಾಶ್‌ರಾಜ, ಧರ್ಮಪುರಿಯ ದೇವದಾಸ, ಮದರ್ ಕರೇಜ್‌, ಮನುಷ್ಯ ಅಂದ್ರೆ ಮನುಷ್ಯನೇ (ನಾಟಕಗಳು), ಕನ್ನಡ ಕಲಿ, ಭಾಷೆ, ಭಾಷೆ ...

READ MORE

Related Books