ಇಂಗ್ಲಿಷ್ ಮೀಡಿಯಂ ಶಾಲೆಗಳು ಸಾಲು ಸಾಲಾಗಿ ತೆರೆಯುತ್ತಿರುವುದರ ಪರಿಣಾಮವಾಗಿ ಹುಡುಗರಿಗೆ ಕನ್ನಡ ಪಠ್ಯ ಕಠಿಣ' ಎಂದು ಹೇಳುವುದು ಒಂದು ಶೋಕಿಯಾಗಿ ಬಿಟ್ಟಿದೆ. ತಾಯಂದಿರೂ ಇತ್ತೀಚಿನ ದಿನಗಳಲ್ಲಿ ನನ್ನ ಮಗನಿಗೆ ಕನ್ನಡ ತುಂಬಾ ಕಷ್ಟ' ಎಂದು ಹೇಳಲು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ. ಕನ್ನಡ ಸಣ್ಣದಾಗಿ ಓದುವುದಕ್ಕೆ ಮತ್ತು ಮಾತನಾಡುವುದಕ್ಕೆ ಬಂದರೆ ಅದೇ ದೊಡ್ಡ ವಿಷಯ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ವ್ಯಾಕರಣ ಸಹಿತ ಗಂಭೀರವಾಗಿ ಅಧ್ಯಯನ ಮಾಡುವುದು ದೂರದ ಮಾತು. ಇಂತಹ ಸಂದರ್ಭದಲ್ಲಿ ಹಳಗನ್ನಡ ಕವಿಸೂಕ್ತಿಗಳನ್ನು ಸುಲಭವಾಗಿ, ಸರಳವಾಗಿ ತಿಳಿದುಕೊಳ್ಳುವ ಒಂದು ಕೈ ಪಿಡಿಯನ್ನು ಟಿ. ಎಸ್. ಗೋಪಾಲ್ ಬರದಿದ್ದಾರೆ.
©2025 Book Brahma Private Limited.