ಭವಿಷ್ಯದ ಭರವಸೆ : ಹಸಿರು ಇಂಧನ

Author : ಟಿ. ಎಸ್.‌ ಗೋಪಾಲ್

Pages 56

₹ 50.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಸಾಂಪ್ರದಾಯಿಕ ಶಾಲಾ ವ್ಯಾಕರಣಗಳಲ್ಲಿ ಓರ್ವರಿಗೆ ಅನೇಕವೇಳೆ ಎದುರಾಗುವ ನಾಮಪದಗಳ ವ್ಯಾಖ್ಯಾನದ ಅನುಸಾರ, ನಾಮಪದಗಳು ಎಲ್ಲ ಮತ್ತು ಆ ಏಕೈಕ ಅಭಿವ್ಯಕ್ತಿಗಳಾಗಿದ್ದು ಅವು ಒಂದು ವ್ಯಕ್ತಿ , ಸ್ಥಳ , ವಸ್ತು , ಘಟನೆ , ವಿಷಯ , ಗುಣಮಟ್ಟ , ಪ್ರಮಾಣ , ಅಥವಾ ಪರಿಕಲ್ಪನೆ , ಇತ್ಯಾದಿಯನ್ನು ಉಲ್ಲೇಖಿಸುತ್ತವೆ. ಇದು ಶಬ್ದಾರ್ಥಕ್ಕೆ ಸಂಬಂಧಿಸಿದ ಒಂದು ವ್ಯಾಖ್ಯಾನವಾಗಿದೆ. ಲೇಖಕ ಟಿ.ಎಸ್. ಗೋಪಾಲ ಅವರು ಬರೆದಿದ್ದಾರೆ.

About the Author

ಟಿ. ಎಸ್.‌ ಗೋಪಾಲ್

ಟಿ. ಎಸ್. ಗೋಪಾಲ್ ಅವರು ಕನ್ನಡದ ಲೇಖಕರು. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿರುವ ಇವರು, ಆ ಕುರಿತ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ಹೀಗೆ ಈವರೆಗೆ ಗೋಪಾಲ್‌ ಅವರು ಒಟ್ಟು 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ 2013ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ. ಅಲ್ಲದೆ ಹಲವಾರು ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಹಾಗೂ ವನ್ಯಜೀವಿಸಂರಕ್ಷಣೆಯನ್ನು ಕುರಿತ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟವಾಗಿವೆ. ...

READ MORE

Reviews

(ಹೊಸತು, ನವೆಂಬರ್ 2012, ಪುಸ್ತಕದ ಪರಿಚಯ)

ಭಾರತವೂ ಸೇರಿದಂತೆ ಅನೇಕ ಹಿಂದುಳಿದ ರಾಷ್ಟ್ರಗಳು ಎದುರಿಸುತ್ತಿರುವ ಬಹುದೊಡ್ಡ ಕೊರತೆ ಯೆಂದರೆ, ಪೆಟ್ರೋಲಿಯಂ ಇಂಧನ. ಈ ಸಮಸ್ಯೆ ಈ ರಾಷ್ಟ್ರಗಳನ್ನು ಯಾವ ಪ್ರಮಾಣದಲ್ಲಿ ಗುಲಾಮಗಿರಿಗೆ ನೂಕಿದೆಯೆಂದರೆ, ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಸಾರ್ವಭೌಮತೆಯನ್ನು ಅಮೆರಿಕಾ ದಂತಹ ರಾಷ್ಟ್ರಗಳ ಪಾದದಡಿ ತಂದಿರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಧನಿಕ ತೈಲೋತ್ಪನ್ನ ರಾಷ್ಟ್ರಗಳು ಹಿಂದುಳಿದ/ಅವಲಂಬಿತ ರಾಷ್ಟ್ರಗಳನ್ನು ಬಹುವಿಧದಲ್ಲಿ ಬೆದರಿಸಿ ನಿರಂತರವಾಗಿ ಸುಲಿಯುತ್ತಿವೆ. ಹಿಂದುಳಿದ ರಾಷ್ಟ್ರಗಳಲ್ಲಿ ಇಂಧನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದು, ವಿದೇಶಿ ವಿನಿಮಯದ ಬಹುಪಾಲನ್ನು ಈ ಇಂಧನದ ಆಮದಿಗೆ ವೆಚ್ಚ ಮಾಡಬೇಕಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹೀಗಿರುವಾಗ ರಾಷ್ಟ್ರದ ಇನ್ನಿತರ ವಲಯಗಳ ಅಭಿವೃದ್ಧಿ ಹೇಗೆ ಸಾಧ್ಯ? ಈ ಹಿಂದುಳಿದ ರಾಷ್ಟ್ರಗಳ ಮುಂದಿನ ಭವಿಷ್ಯವಂತೂ ಭೀಕರವಾಗುವ ಸಂಭವವೇ ಹೆಚ್ಚು. ಇದಕ್ಕಿರುವ ಒಂದೇ ಒಂದು ಪರ್ಯಾಯವೆಂದರೆ ಜೈವಿಕ ಇಂಧನ ಉತ್ಪಾದನೆ. ಜೈವಿಕ ಇಂಧನ ನಮ್ಮ ಪರಂಪರೆಯ ಕೊಡುಗೆ ಆಧುನಿಕತೆಯ ಅಮಲಿನಲ್ಲಿ ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ನಿರ್ಲಕ್ಷ್ಯ ಮಾಡಲಾಗಿತ್ತಾದರೂ ಸಮರೋಪಾದಿಯಲ್ಲಿ ಮುನ್ನುಗ್ಗುತ್ತಿರುವ ಸಮಾಜಕ್ಕೆ ಮತ್ತೆ ಹಿಂದಿರುಗಿ ನೋಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು, ಕೇಂದ್ರ-ರಾಜ್ಯ ಸರ್ಕಾರಗಳೆರಡೂ ಜೈವಿಕ ಇಂಧನ ಉತ್ಪಾದನೆಗೆ ಒತ್ತು ನೀಡುತ್ತಿರುವುದು ಸಂತಸವೇ ಸರಿ. ಈ ನಿಟ್ಟಿನಲ್ಲಿ ಟಿ. ಎಸ್. ಗೋಪಾಲ್‌ ರವರ ಈ ಕೃತಿ ಸ್ವಾಗತಾರ್ಹ ವಾದುದು. ಜೈವಿಕ ಇಂಧನದ ಇತಿಹಾಸ, ಉತ್ಪಾದನೆ, ಬಳಕೆಯ ವಿಧಾನಗಳು ಹಾಗೂ ಅನಿವಾರ್ಯತೆಯನ್ನು ಕೃತಿ ಮನಗಾಣಿಸುತ್ತದೆ.

Related Books