'ವಿರುದ್ಧಾರ್ಥಕ ಪದಗಳು' ಜಗದೀಶ ಬ. ಹಾದಿಮನಿ ಮತ್ತು ರವಿ ಬ ಹಾದಿಮನಿ ಅವರ ವ್ಯಾಕರಣ ಕೃತಿ. ಎಲ್ಲಾ ಪದಗಳಿಗೂ ವಿರುದ್ಧಾರ್ಥಕ ಪದಗಳಿರುವುದಿಲ್ಲ. ಹಾಗೆ ಹುಡಕಲು ಹೋಗುವುದೂ ಸರಿಯಲ್ಲ. ಪ್ರತಿ ಪದಕ್ಕೂ ವಿರುದ್ಧಾರ್ಥಕ ಪದಗಳನ್ನು ಹುಡುಕುತ್ತೇವೆಂದು ಹೊರಡುವುದು 'ಹಾಳು ಭಾವಿಯಲ್ಲಿ ನೀರು ಹುಡುಕಿದಂತೆ', ಪ್ರೀತಿ-ಸ್ನೇಹ-ಮಮತೆ ವಾತ್ಸಲ್ಯದಂಥ ಭಾವನಾತ್ಮಕ ಪದಗಳಿಗೆ ಒತ್ತಾಯಪೂರ್ವಕವಾಗಿ ಸಮೀಪದ ವಿರುದ್ಧ ಪದಗಳನ್ನು ಹಚ್ಚಿ ಸರಿದೂಗಿಸಬಹುದೆ ವಿನಃ ಎಲ್ಲರೂ ಒಪ್ಪುವಂಥ ಸರ್ವಸಮ್ಮತ ಸರ್ವಸಮರ್ಪಕ ಪದಗಳನ್ನಲ್ಲ. ಹಾಗೆ ನೋಡಿದರೆ ಪ್ರತಿ ಪದಗಳಿಗೂ ವಿರುದ್ಧಾರ್ಥಕ ಪದಗಳೇ ಇಲ್ಲ. ಏಕೆಂದರೆ ಪ್ರತಿ ಪದಗಳೂ ಸ್ವತಂತ್ರ ಪದಗಳೇ, ನಮ್ಮ ಅನುಕೂಲಕ್ಕಾಗಿ ಅವುಗಳನ್ನು ಮಾಡಿಕೊಂಡಿದ್ದೇವೆ ಹೊರತು ನಾವು ಮಾಡಿದ್ದೇ ಅಂತಿಮ ಸತ್ಯಗಳಲ್ಲ. ಎಂಬುದನ್ನು ಲೇಖಕರು ಪುಸ್ತಕದಲ್ಲಿ ತಿಳಿಸಿದ್ದಾರೆ.
©2024 Book Brahma Private Limited.