`ವ್ಯಾಕರಣ ಕುಂಜ’ ಕೃತಿಯು ಶಂಭುಲಿಂಗ ವಾಲ್ದೊಡ್ಡಿ ಅವರ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ಬರೆದಿರುವ ವ್ಯಾಕರಣ ಕೃತಿಯಾಗಿದೆ. ಕೃತಿಯ ಪೀಠಿಕೆಯಲ್ಲಿನ ವಿಚಾರಗಳು ಹೀಗಿವೆ : ಲೋಕದಲ್ಲಿ ನಡೆಯುವ ವ್ಯವಹಾರಗಳೂ ಎಲ್ಲಾ ಪರಸ್ಪರ ಮಾತನಾಡುವುದರಿಂದ, ಬರೆಯುವುದರಿಂದ ನಡೆಯುತ್ತವೆ. ತಮ್ಮ ತಮ್ಮ ಮನಸ್ಸಿನ ವಿಚಾರಗಳನ್ನು ಎಲ್ಲರೂ ಮಾತಿನ ಮೂಲಕವೇ ಇನ್ನೊಬ್ಬರಿಗೆ ತಿಳಿಯಪಡಿಸುತ್ತಾರೆ. ಆಡಿದ ಮಾತುಗಳನ್ನು, ಆಡಬೇಕಾದ ಮಾತುಗಳನ್ನು ಗೊತ್ತಾದ ಲಿಪಿಯ ಮೂಲಕ ಬರೆಯುವುದೇ ಬರವಣಿಗೆಯೆನಿಸುವುದು, ಬರೆಯುವುದು. ಮಾತನಾಡುವುದು ಮುಖ್ಯವಾಗಿ ಶಬ್ದಗಳ ಮೂಲಕವೇ ಆಗಿದೆ. ಶುದ್ಧವಾಗಿ ಬರೆಯಬೇಕಾಗುತ್ತದೆ. ಅಲ್ಲದೆ ಅವನು ಮಾತನಾಡುವುದೂ, ಒಂದೊಂದು ಶಬ್ದಕ್ಕೂ ಒಂದೊಂದು ಅರ್ಥವಿದೆ. ಶಬ್ದಗಳ ಉಚ್ಚಾರವಾಗಲಿ ಬರವಣಿಗೆಯಾಗಲಿ ಅರ್ಥಪೂಾರ್ಣವಾಗಿರಬೇಕು. ಶುದ್ಧವಾಗಿ ಮಾತನಾಡುವುದೂ, ಬರೆಯುವುದೂ ಉತ್ತಮ ವಿದ್ಯಾವಂತನ ಲಕ್ಷಣವಾಗಿದೆ. ವಿದ್ಯಾವಂತನೆನ್ನಿಸಿಕೊಳ್ಳ ಬೇಕಾದವನು ತಾನು ಬರೆಯುವ ಬರವಣಿಗೆಯನ್ನು ಪೂರ್ಣ ವಿಚಾರಮಾಡಿಸಿ, ಬರೆಯುವುದೂ ಉತ್ತಮ ವಿದ್ಯಾವಂತನ ಲಕ್ಷಣವಾಗಿದೆ. ವಿದ್ಯಾವಂತನೆನ್ನಿಸಿಕೊಳ್ಳಬೇಕಾದವನು ತಾನು ಬರೆಯುವ ಬರವಣಿಗೆಯಷ್ಟೇ ಅವನು ಮಾತನಾಡುವುದೂ ಅರ್ಥಪೂರ್ಣವಾಗಿರಬೇಕು. ಶಬ್ದ ಮತ್ತು ಶಬ್ದಗಳ ಸಂಬಂಧ ಹೀಗೆ ಹೀಗೆಯೇ ಇರಕಬೇಕೆಂಬುದನ್ನು ವ್ಯಾಕರಣಶಾಸ್ತ್ರ ಗೊತ್ತುಪಡಿಸುವುದು, ಆದುದರಿಂದ ಶುದ್ಧವಾಗಿ, ಅರ್ಥಪೂಾರ್ಣವಾಗಿ ಮಾತನಾಡುವ ಮತ್ತು ಬರೆಯುವ ಶಕ್ತಿಯನ್ನು ಪಡೆಯಬೇಕಾದರೆ ಅವಶ್ಯವಾಗಿ ವ್ಯಾಕರಣಶಾಸ್ತ್ರವನ್ನು ಅಭ್ಯಾಸ ಮಾಡಲೇಬೇಕಾಗುವುದು. ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಆಯಾಯ ಭಾಷೆಗಳ ಸ್ವರೂಪವನ್ನು ಅವುಗಳ ವ್ಯಾಕರಣವು ತಿಳಿಯಪಡಿಸುತ್ತದೆ. ಆ ಭಾಷೆಗಳನ್ನು ಕಲಿಯುವವರು ಆ ಭಾಷೆಯ ವ್ಯಾಕರಣ ಶಾಸ್ತ್ರವನ್ನು ಅಭ್ಯಾಸ ಮಾಡಬೇಕು. ಕನ್ನಡ ಭಾಷೆಯನ್ನು ಕಲಿಯುವವರು ಕನ್ನಡ ವ್ಯಾಕರಣವನ್ನು ಅವಶ್ಯವಾಗಿ ಓದಿ, ಅದರ ಶಬ್ದಗಳ ಶುದ್ಧರೂಪಗಳನ್ನೂ, ಅವುಗಳ ತಿಳಿಯಬೇಕಾಗುವುದು, ಸಂಬಂಧವನ್ನೂ ಸರ್ವ ವ್ಯವಹಾರಗಳಿಗೆ ಮೂಲವಾದುದು ಶಬ್ದಾರ್ಥಗಳ ನಿರ್ಣಯವೇ ಆಗಿದೆಯೆಂಬುದನ್ನು ತಿಳಿಸಲಾಗಿದೆ. ವ್ಯಾಕರಣದಿಂದ ಪದ, ಪದದಿಂದ ಅರ್ಥ, ಅರ್ಥದಿಂದ ಜ್ಞಾನವು ಉಂಟಾಗುತ್ತದೆ. ಭಾಷೆಯಲ್ಲಿ ಬಲ್ಲವನೆನ್ನಿಸಿಕೊಳ್ಳಬೇಕಾದರೆ, ಕೂಲಂಕಷವಾಗಿ ವ್ಯಾಕರಣಶಾಸ್ತ್ರವನ್ನು ಓದಲೇಬೇಕು. ಭಾಷೆಯ ನಿಯಮಗಳನ್ನು ತಿಳಿಯಲೇಬೇಕು. ಮನಸ್ಸಿಗೆ ಬಂದ ಹಾಗೆ ಭಾಷೆಯ ಬಳಕೆಯನ್ನು ಮಾಡುತ್ತ ಹೋದರೆ ಕಾಲಾನಂತರದಲ್ಲಿ ಶುದ್ಧವಾದ ಭಾಷೆಯ ಸ್ವರೂಪವೇ ಹಾಳಾಗಿಹೋಗಬಹುದು. ಶುದ್ಧವಾದ ಭಾಷೆಯನ್ನು ಬೆಳೆಸಿ, ಉಳಿಸಿಕೊಂಡು ಬರುವ ಸಂಪ್ರದಾಯವನ್ನು ಕನ್ನಡ ನಾಡಿನ ಮಕ್ಕಳು ಅನುಸರಿಸಬೇಕು. ನಮ್ಮ ಮಕ್ಕಳು ಶುದ್ಧವಾಗಿ ಬರೆಯುವುದನ್ನೂ, ಮಾತನಾಡುವುದನ್ನೂ ಅಭ್ಯಾಸ ಮಾಡಿ, ಸಂಸ್ಕೃತ ಜನಾಂಗವೆಂದೆನ್ನಿಸಿಕೊಳ್ಳಬೇಕು. ಪ್ರೌಢಶಾಲೆಗಳಲ್ಲಿ ಓದುವ ಮಕ್ಕಳು ವ್ಯಾಕರಣದಲ್ಲಿರುವ ಎಲ್ಲ ನಿಬಂಧನೆಗಳನ್ನೂ ಚೆನ್ನಾಗಿ ಮುಖ್ಯೋದ್ದೇಶದಿಂದ ಈ ವ್ಯಾಕರಣಪುಸ್ತಕ ರಚಿಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
©2024 Book Brahma Private Limited.