ವ್ಯಾಕರಣ ಗ್ರಂಥಗಳಲ್ಲಿ ಪಾಣಿನಿಯ ಗ್ರಂಥವೇ ಶ್ರೇಷ್ಠ ಎಂಬುದಕ್ಕೆ ಪುರಾವೆ ಬೇಕಿಲ್ಲ. ಈತನ ವ್ಯಾಕರಣಶಾಸ್ತ್ರವೇ ಸಂಸ್ಕೃತ ವಾಙ್ಮಯಕ್ಕೂ ಮೂಲ. ಈತನನ್ನಯ ವ್ಯಾಕರಣಶಾಸ್ತ್ರದ ಪಿತಾಮಹ ಎಂದೇ ಕರೆಯುತ್ತಾರೆ. ಭಾರತೀಯ ಇತರೆ ಭಾಷೆಗಳಿಗೂ ಪಾನಿನಿಯ ವ್ಯಾಕರಣ ಶಾಸ್ತ್ರವೇ ಅನ್ವಯಿಸಲಾಗುತ್ತಿದೆ. ಈ ಶಾಸ್ತ್ರದಲ್ಲಿ 3493 ಸೂತ್ರಗಳಿವೆ. ವೇದ ಕಾಲದಲ್ಲಿ ಅನೇಕ ವ್ಯಯ್ಯಾಣಿಕರಿದ್ದರೂ ಪಾಣಿನಿಯ ವ್ಯಾಕರಣ ಶಾಸ್ತ್ರ ರೂಪುಗೊಂಡ ನಂತರ ಬಹುತೇಕ ಎಲ್ಲವೂ ಗೌಣವಾದವು ಎಂದೇ ಹೇಳಬೇಕು. ಈತನು ಶಬ್ದಾನುಶಾಸನ ಎಂಬ ವ್ಯಾಕರಣ ಗ್ರಂಥ ರಚಿಸಿದ್ದು, ಅದನ್ನು ಅಷ್ಟಾಧ್ಯಾಯಿ ಎಂದೇ ಹೇಳಲಾಗುತ್ತಿದೆ. ಇಂತಹ ಮಹಾಕವಿ, ವಿದ್ವಾಂಸ, ಮುನಿಯೂ ಆಗಿದ್ದ ಪಾಣಿನಿಯ ಕುರಿತು ಸಮಗ್ರ ಜೀವನ ಹಾಗೂ ವ್ಯಾಕರಣದ ಎಲ್ಲ ಮಗ್ಗಲುಗಳನ್ನು ವಿಶ್ಲೇಷಿಸಿದ ಕೃತಿ ಇದು.
©2025 Book Brahma Private Limited.