ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣ ಒದಗಿಸಿಕೊಡುವ ನಿಟ್ಟಿನಲ್ಲಿ ಡಿ.ಎನ್. ಶಂಕರ್ ಭಟ್ ಅವರ ಮೂರನೇ ಪುಸ್ತಕ ಇದಾಗಿದೆ. ಇದರಲ್ಲಿ ‘ಎಸಕಪದಗಳ ಪಾಂಗುಗಳು’ ಮತ್ತು ‘ಪಾಂಗಿಟ್ಟಳದಲ್ಲಿ ಮಾರ್‍ಪಾಡುಗಳು’ ಎಂಬ ಎರಡು ಪಸುಗೆಗಳಿವೆ. ಇವುಗಳಲ್ಲಿ ಮೊದಲನೆಯ ಪಸುಗೆ ಎಸಕಪದಗಳೊಂದಿಗೆ ಎಂತಹ ಪಾಂಗುಗಳು ಮತ್ತು ಎಶ್ಟು ಪಾಂಗುಗಳು ಬರಬಲ್ಲವು ಎಂಬುದನ್ನು ತಿಳಿಸುತ್ತದೆ, ಮತ್ತು ಈ ವಿಶಯವನ್ನವಲಂಬಿಸಿ ಎಸಕಪದಗಳನ್ನು ಒಟ್ಟು ಹದಿಮೂರು ಪಾಂಗಿಟ್ಟಳಗಳಲ್ಲಿ ಗುಂಪಿಸುತ್ತದೆ. ಪಾಂಗುಗಳಲ್ಲಿಯೂ ಇಟ್ಟಳದ ಪಾಂಗುಗಳು ಮತ್ತು ನೆರವು ಪಾಂಗುಗಳು ಎಂಬ ಎರಡು ಬಗೆಗಳನ್ನು ಗುರುತಿಸಲಾಗಿದ್ದು, ಅವುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಇದೇ ಪಸುಗೆ ಕೊಡುತ್ತದೆ. ಕೆಲವು ಎಸಕಪದಗಳಲ್ಲಿ ಯಾವ ಮಾರ್‍ಪಾಡನ್ನೂ ಮಾಡದೆ ಅವುಗಳ ಪಾಂಗಿಟ್ಟಳದಲ್ಲಿ ಮಾರ್‍ಪಾಡನ್ನು ಮಾಡಲು ಬರುತ್ತದೆ, ಮತ್ತು ಹೆಚ್ಚಿನ ಎಸಕಪದಗಳಿಗೂ ಕೆಲವು ಒಟ್ಟುಗಳನ್ನು ಇಲ್ಲವೇ ಪದಗಳನ್ನು ಸೇರಿಸಿ ಅವುಗಳ ಪಾಂಗಿಟ್ಟಳವನ್ನು ಮಾರ್‍ಪಡಿಸಲು ಬರುತ್ತದೆ.
©2025 Book Brahma Private Limited.