ಕನ್ನಡದ ಖ್ಯಾತ ಕವಿ, ಸಾಹಿತಿ ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ಬರೆದ ಕೃತಿ-ಇಂಗ್ಲಿಷ್ ಮೂಲಕ ಕನ್ನಡ ಕಲಿಯಿರಿ. ಕನ್ನಡ ಭಾಷೆಯನ್ನು ಕಲಿಯಲು ಬಯಸುವ ಜನಕ್ಕೆ ಈ ಪುಸ್ತಕ ಬಹಳ ಸಹಾಯಕವಾದ ಗ್ರಂಥ. ಪಾಠರೂಪದ ಹಲವು ಅಧ್ಯಾಯಗಳಿವೆ. ದಿನನಿತ್ಯದ ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಬೇಕಾದ ಮಾತುಗಳು ಅವುಗಳಲ್ಲಿ ಬಂದಿವೆ. ಜೊತೆ ಜೊತೆಗೆ ಇಂಗ್ಲಿಷ್‌ನಲ್ಲಿ ಅರ್ಥವನ್ನೂ ಕೊಡಲಾಗಿದೆ. ಪಾಠದ ಕೊನೆಯಲ್ಲಿ ವ್ಯಾಕರಣದ ಅಂಶಗಳನ್ನೂ ಕೊಟ್ಟಿದೆ. ಕೆಲವು ಅಭ್ಯಾಸ ಭಾಗಗಳೂ ಇವೆ. ಕನ್ನಡೇತರರಿಗೆ ಕನ್ನಡ ಕಲಿಯಲು ಉತ್ತಮ ಕೃತಿ.
©2025 Book Brahma Private Limited.