‘ಪದಸರಪಳಿ’ ಇದು ಪ್ರಕಾಶ್ ರಾಜಗೋಳಿ ಅವರ ಕೃತಿಯಾಗಿದ್ದು, ಇದು ಪದಬಂಧಗಳ ಸಂಕಲನವಾಗಿದೆ. ಕನ್ನಡದಲ್ಲಿ ಅಂತ್ಯಾಕ್ಷರಿ ಮಾದರಿಯ ಪದಗಳ ಆಟ ಮಾಡಿದರೆ ಹೇಗೆ? ಎನ್ನುವ ಆಲೋಚನೆಯೇ “ಪದಸರಪಳಿ”ಗೆ ಪ್ರೇರಣೆ. ಒಂದು ಪುಟದಲ್ಲಿ ತಲಾ ನಾಲ್ಕಕ್ಷರಗಳ ಹತ್ತು ಪದಗಳನ್ನು ಸುಲಭ ಸುಳಿವುಗಳ ಮೂಲಕ ಕಂಡುಹಿಡಿಯಬೇಕು. ಹಿಂದಿನ ಶಬ್ದದ ಕೊನೆಯ ಎರಡಕ್ಷರಗಳು ಮತ್ತು ಮುಂದಿನ ಶಬ್ದದ ಆರಂಭದ ಎರಡಕ್ಷರಗಳು ಒಂದೇ ಇರಬೇಕಾದುದು ನಿಯಮ. ವಿಶೇಷವಾಗಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿ ಗಳನ್ನು ಗುರಿಯಾಗಿಟ್ಟುಕೊಂಡು ಪುಸ್ತಕ ರಚಿಸಲಾಗಿದೆ.
©2025 Book Brahma Private Limited.