ಭಟ್ಟಾ ಕಳಂಕ ದೇವ ವಿರಚಿತ ಸಂಸ್ಕೃತ ಮೂಲದ ಕರ್ಣಾಟಕ ಶಬ್ದಾನುಶಾಸನದ ವಿಸ್ತಾರವಾದ ಕನ್ನಡ ಅನುವಾದದ ಕೃತಿಯನ್ನು ಕುಂಡಲಿ ಗಿರಿಯಾಚಾರ್ ರು ರಚಿಸಿದ್ದು, ಅದನ್ನು ಶಿ.ಶಿ. ಬಸವನಾಳರು ಸಂಪಾದಿಸಿದ್ದಾರೆ. ಆ ಕೃತಿಯೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಹಳಗನ್ನಡ ವ್ಯಾಕರಣ ಕುರಿತು ಬರೆದ ಮೊದಲ ಗ್ರಂಥವಾಗಿ ನಾಗವರ್ಮನ ಶಬ್ದಸ್ಮೃತಿ ಗ್ರಂಥ. ಎರಡನೇಯದ್ದು, ಕರ್ಣಾಟಕ ಭಾಷಾ ಭೂಷಣ ಎಂಬುದು. ಮೂರನೇ ಕೃತಿ ಎಂದರೆ ಕೇಶಿರಾಜ ಬರೆದ ಶಬ್ದಮಣಿ ದರ್ಪಣ ಹಾಗೂ ನಾಲ್ಕನೆಯದ್ದೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಇದನ್ನು ಮೊದಲು ಭಟ್ಟಾ ಕಳಂಕದೇವ ಎಂಬಾತ ಸಂಸ್ಕೃತದಲ್ಲಿ ರಚಿಸಿದ್ದ. ಪ್ರಯೋಗ-ಪ್ರಾಮಣ್ಯದಲ್ಲಿ ಶಬ್ದಮಣಿ ದರ್ಪಣವನ್ನು ಸರಿಗಟ್ಟದಿದ್ದರೂ ಶಾಸ್ತ್ರೀಯ ವಿವೇಚನೆಯಲ್ಲಿ ಪ್ರೌಢವೂ, ವಿಶ್ವಾಸಾರ್ಹವೂ ಆಗಿದೆ ಎಂದು ಮುನ್ನುಡಿಯಲ್ಲಿ ಕೃತಿಯ ಸಂಪಾದಕ ಶಿ.ಶಿ. ಬಸವನಾಳರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.