ವ್ಯಾಕರಣ ಮತ್ತು ಛಂದಸ್ಸು

Author : ಕುಮಾರಚಲ್ಯ

Pages 126

₹ 70.00




Year of Publication: 2018
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಾ ಮಹಾಕವಿ ರಸ್ತೆ ಚಾಮರಾಜಪೇಟೆ

Synopsys

ಲೇಖಕ ಡಾ. ಕುಮಾರಚಲ್ಯ ಅವರು ರಚಿಸಿದ ವ್ಯಾಕರಣ ಮತ್ತು ಛಂದಸ್ಸಿನ ವಿವರಗಳಿರುವ ಕೃತಿ ಇದು. ವ್ಯಾಕರಣದ ಅರ್ಥ ಪದ ಕ್ರಮ ಇತರ ಸಂಕೇತಗಳ ಮೂಲಕ ವಾಕ್ಯದಲ್ಲಿ ತಿಳಿಸಲಾಗಿದೆ. ಛಂದಸ್ಸುಗಳಿಲ್ಲದ ಸಾಹಿತ್ಯವು ಬಿಗಿಬಂಧವಿಲ್ಲದ ನಿರಸ ವಾಕ್ಯಗಳಂತೆ. ಗುರು-ಲಘು ಗಣಗಳು ಸಾಹಿತ್ಯದ ಭಾವನೆಯ ಸಮರ್ಥವಾಗಿ ಹಿಡಿದಿಡುತ್ತವೆ. ಹೀಗಾಗಿ, ಛಂದಸ್ಸು ಎಂದರೆ ಪದಗಳನ್ನು ರಚಿಸುವ ಕಲೆ ಎಂದೂ ಹೇಳಲಾಗುತ್ತದೆ. ಈ ಛಂದಸ್ಸುಗಳಲ್ಲಿ ಪ್ರಾಸ, ಯತಿ ಹಾಗೂ ಗಣ ಎಂದು ಮೂರು ವಿಭಾಗಗಳಿವೆ. ಪ್ರಾಸಗಳಲ್ಲಿ ಆದಿ, ಮಧ್ಯ ಹಾಗೂ ಅಂತ್ಯ ಪ್ರಾಸಗಳಿರುತ್ತವೆ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿಯಾಗಿದೆ.

About the Author

ಕುಮಾರಚಲ್ಯ

ಅಕ್ಯಾಡೆಮಿಕ್ ವಲಯದಲ್ಲಿ ಡಾ.ಸಿ.ಎಸ್.ಶಿವಕುಮಾರಸ್ವಾಮಿ ಎಷ್ಟು ಪ್ರಸಿದ್ದರೋ, ಕುಮಾರಚಲ್ಯ, ನಾನ್- ಅಕ್ಯಾಡೆಮಿಕ್ ವಲಯದಲ್ಲಿ ಅಷ್ಟೇ ಪ್ರಸಿದ್ಧರು. ನಿರರ್ಗಳವಾಗಿ ಹಳಗನ್ನಡ ಕಾವ್ಯವನ್ನು ಕುರಿತು ಅಧಿಕೃತವಾಗಿ ವ್ಯಾಖ್ಯಾನಿಸುವ ಕೆಲವೇ ಕೆಲವು ವಿದ್ವಾಂಸರ ಪೈಕಿ ಚಲ್ಯ ಸಹ ಒಬ್ಬರು. ಪ್ರತೀ ಮಾತಿನಲ್ಲೂ ಕೇಳುಗನನ್ನು ಪರವಶಗೊಳಿಸುವ ಛಾತಿ ಬೇರೆ. ಹಾಗೆಯೇ, ಎಜ್ಯುಕೇಟ್ ಮಾಡುವ ಹಂಬಲ ಕೂಡ. ವಿದ್ಯಾರ್ಥಿ ಸಮೂಹದಿಂದ ಚಲ್ಯಮೇಸ್ಟ್ರು ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಇವರು ಬರೆದಿರುವುದು, ಪ್ರಕಟಿಸಿರುವುದು ಕಡಿಮೆ ಎನಿಸಿದರೂ, ಅವೊಂದೊಂದು ಮೌಲಿಕ. ಚಲ್ಯ ಎಂಬ ಪುಟ್ಟ ಹಳ್ಳಿಯ ಈ ಕುಮಾರಸ್ವಾಮಿಯವರ ಪ್ರಖರ ಬಂಡಾಯೀಕೃತ ಆಲೋಚನೆಗಳು ಪ್ರಪ್ರಥಮಬಾರಿಗೆ ಪ್ರಕಟಗೊಂಡದ್ದು ನವಾಬ ಎಂಬ ಗಮನಾರ್ಹ ಕವನ ಸಂಕಲನದ ...

READ MORE

Related Books