ಕನ್ನಡದ್ದೇ ವ್ಯಾಕರಣ ರಚಿಸುವಲ್ಲಿ ನಿರತರಾಗಿದ್ದ ಶಂಕರಭಟ್ ಅವರ ಕನ್ನಡ ಬರಹದ ಸೊಲ್ಲರಿಮೆ ಪುಸ್ತಕದ ಐದನೇ ಭಾಗ ಇದಾಗಿದೆ. ‘ಪರಿಚೆಪದಗಳು’ ಮತ್ತು ‘ಎಣಿಕೆಪದಗಳು’ ಎಂಬ ಎರಡು ಪಸುಗೆಗಳಿವೆ. ಈ ತುಂಡಿನ ಮೊದಲನೇ ಪಸುಗೆಯಲ್ಲಿ ಅಗಲ, ಉದ್ದ, ಕೆಂಪು, ಉರುಟು, ಮೊದಲಾದ ಹೆಸರು ಪರಿಚೆಗಳನ್ನು ಮತ್ತು ಮೆಲ್ಲಗೆ, ಹಿಂದೆ, ಬಳಿಕ, ತುಸು, ಮೊದಲಾದ ಎಸಕಪರಿಚೆಗಳನ್ನು ಗುಂಪಿಸುವುದು ಹೇಗೆ, ಅವನ್ನು ಬೇರೆ ಬಗೆಯ ಪದಗುಂಪುಗಳಿಂದ ಬೇರ್ಪಡಿಸುವುದು ಹೇಗೆ, ಸೊಲ್ಲುಗಳಲ್ಲಿ ಅವನ್ನು ಹಂತಪದಗಳೊಂದಿಗೆ ಮತ್ತು ಹೋಲಿಕೆಯ ನುಡಿತಗಳೊಂದಿಗೆ ಬಳಸುವುದು ಹೇಗೆ ಎಂಬುದನ್ನೂ ಈ ಪಸುಗೆಯಲ್ಲಿ ತಿಳಿಸಲಾಗಿದೆ. ಈ ಅಯ್ದನೇ ತುಂಡಿನ ಎರಡನೇ ಪಸುಗೆಯಲ್ಲಿ ಒಂದು, ಎರಡು, ಮೂರು ಮೊದಲಾದ ಎಣಿಕೆಯ ಪದಗಳನ್ನು ಹೆಸರುಪದ ಮತ್ತು ಪರಿಚೆಪದಗಳಿಂದ ಬೇರ್ಪಡಿಸುವುದು ಹೇಗೆ, ಅವನ್ನು ಬಳಸಿರುವ ಪದಗಳಲ್ಲಿ ಕಾಣಿಸುವ ಇಟ್ಟಳಗಳು ಎಂತಹವು, ಮತ್ತು ಸೊಲ್ಲುಗಳಲ್ಲಿ ಅವುಗಳ ಬಳಕೆಯೆಂತಹುದು ಎಂಬುದನ್ನು ತಿಳಿಸಲಾಗಿದೆ.
©2024 Book Brahma Private Limited.