ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ.ಎನ್. ಶಂಕರ ಭಟ್ ಅವರ ಪ್ರಯತ್ನದ ಮುಂದುವರೆದ ಭಾಗ ಇದಾಗಿದೆ. ಇದರಲ್ಲಿ ‘ಎಸಕ ಪದಗಳ ಬಳಕೆ’ ಮತ್ತು ‘ಹೆಸರುಕಂತೆಗಳ ಇಟ್ಟಳ’ ಎಂಬ ಎರಡು ಭಾಗಗಳಿವೆ. ಕನ್ನಡದ ಸೊಲ್ಲುಗಳ ಕೊನೆಯಲ್ಲಿ ಬರುವ ಎಸಕಪದಗಳು ಒಂದು ಎಸಕವನ್ನು ತುಂಬಾ ಅಡಕವಾಗಿ ತಿಳಿಸುತ್ತವೆ; ಅದರ ಕುರಿತಾಗಿ ಕೆಲವು ಹೆಚ್ಚಿನ ವಿವರಗಳನ್ನು ಅವುಗಳೊಂದಿಗೆ ಬರುವ ಒಟ್ಟುಗಳು ಮತ್ತು ನೆರವೆಸಕಪದಗಳು ತಿಳಿಸುತ್ತವೆ; ಈ ಕೆಲಸ ಹೇಗೆ ನಡೆಯುತ್ತದೆ ಎಂಬುದನ್ನು ಈ ಎರಡನೇ ತುಂಡಿನ ಮೊದಲನೆಯ ಪಸುಗೆ ವಿವರಿಸುತ್ತದೆ. ಸೊಲ್ಲುಗಳು ತಿಳಿಸುವ ಎಸಕಗಳಲ್ಲಿ ಹಲವು ಬಗೆಯ ಪಾಂಗುಗಳು ತೊಡಗಿಕೊಂಡಿದ್ದು, ಅವನ್ನು ಗುರುತಿಸುವುದಕ್ಕಾಗಿ ಹೆಸರುಕಂತೆಗಳು ಬಳಕೆಯಾಗುತ್ತವೆ. ಈ ಕೆಲಸವನ್ನು ನಡೆಸುವುದಕ್ಕಾಗಿ ಅವು ಪಾಂಗುಗಳ ಪರಿಚೆ, ಅಳವಿ ಮತ್ತು ನೆಲೆಗಳನ್ನು ತಿಳಿಸಬೇಕಾಗುತ್ತದೆ. ಹೆಸರುಕಂತೆಗಳಲ್ಲಿ ಬರುವ ನೆರವುಪದಗಳು ಮತ್ತು ನುಡಿತಗಳು ಇದನ್ನು ಹೇಗೆ ನಡೆಸುತ್ತವೆ ಎಂಬುದನ್ನು ಈ ತುಂಡಿನ ಎರಡನೆಯ ಭಾಗವು ವಿವರಿಸುತ್ತದೆ.
©2024 Book Brahma Private Limited.